PrajatvkannadaPrajatvkannada
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Subscribe to Updates

Get the latest creative news from FooBar about art, design and business.

What's Hot

Bombay jayashree: ಪ್ರಜ್ಞಾಹೀನ ಸ್ಥಿತಿಯಲ್ಲಿ ಖ್ಯಾತ ಗಾಯಕಿ ಬಾಂಬೆ ಜಯಶ್ರೀ ಪತ್ತೆ

March 24, 2023

Ajith Kumar: ತಮಿಳು ನಟ ಅಜಿತ್ ಕುಮಾರ್ ತಂದೆ ಸುಬ್ರಮಣಿಯಂ ನಿಧನ

March 24, 2023

ಹಿಂಡೆನ್ ಬರ್ಗ್ ವರದಿ ಬಳಿಕ ಜಾಕ್ ಡೋರ್ಸಿ ಸಂಪತ್ತಿನ ಮೌಲ್ಯ ಭಾರೀ ಕುಸಿತ

March 24, 2023
Facebook Twitter Instagram
Friday, March 24
Facebook Instagram YouTube
PrajatvkannadaPrajatvkannada
Demo
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ
PrajatvkannadaPrajatvkannada
Home » Bengaluru Mysuru Expressway- ದಶಪಥ ಟೋಲ್‌ ಸಂಗ್ರಹಕ್ಕೆ ಮೊದಲ ದಿನವೇ ತಾಂತ್ರಿಕ ಸಮಸ್ಯೆ, ಪ್ರತಿಭಟನೆ ಬಿಸಿ; ವಾಹನ ಸವಾರರು ಗರಂ
ಬೆಂಗಳೂರು Prajatv KannadaBy Prajatv KannadaMarch 14, 2023

Bengaluru Mysuru Expressway- ದಶಪಥ ಟೋಲ್‌ ಸಂಗ್ರಹಕ್ಕೆ ಮೊದಲ ದಿನವೇ ತಾಂತ್ರಿಕ ಸಮಸ್ಯೆ, ಪ್ರತಿಭಟನೆ ಬಿಸಿ; ವಾಹನ ಸವಾರರು ಗರಂ

Facebook Twitter WhatsApp Reddit Email Telegram
Share
Facebook Twitter WhatsApp LinkedIn Email

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ (Bengaluru Mysuru Expressway) ಸಂಚಾರಕ್ಕೆ ಮುಕ್ತಗೊಂಡಿದ್ದು ಮಂಗಳವಾರದಿಂದ ಟೋಲ್ (Toll) ಸಂಗ್ರಹವೂ ಪ್ರಾರಂಭವಾಗಿದೆ. ಆದರೆ ಟೋಲ್ ಸಂಗ್ರಹ ಪ್ರಾರಂಭವಾದ ಮೊದಲ ದಿನವೇ ತಾಂತ್ರಿಕ ದೋಷ ಕಂಡುಬಂದಿದೆ. ಇದರಿಂದ ವಾಹನ ಸವಾರರು ಬೆಳಗ್ಗೆಯಿಂದಲೇ ಪರದಾಡುವಂತಾಗಿದೆ.

ಮಂಗಳವಾರ ಕಣಮಿಣಕಿ ಟೋಲ್‌ನಲ್ಲಿ ಆರಂಭದಲ್ಲೇ ತಾಂತ್ರಿಕ ದೋಷ ಕಂಡುಬಂದಿದೆ. ಫಾಸ್ಟ್ ಟ್ಯಾಗ್ (Fast Tag) ಅಳವಡಿಸಲಾಗಿದ್ದರೂ ಅವು ಕಾರ್ಯನಿರ್ವಹಿಸುತ್ತಿಲ್ಲ. ಕೆಲ ಬೂತ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದಿದ್ದು, ವಾಹನ ಸವಾರರು ಪರದಾಡಿದ್ದಾರೆ. ಅತ್ತ ಫಾಸ್ಟ್ ಟ್ಯಾಗ್ ಇಲ್ಲದೇ ಹೋದ ವಾಹನ ಸವಾರರು ಅದರ ದುಪ್ಪಟ್ಟು ದರವನ್ನು ಕಟ್ಟಬೇಕಾಗುತ್ತದೆ.

ಟೋಲ್ ಶುಲ್ಕ ಎಷ್ಟು?
ಬೆಂಗಳೂರಿನಿಂದ ನಿಡಘಟ್ಟದವರೆಗೆ ಸುಮಾರು 56 ಕಿ.ಮೀ ರಸ್ತೆಗೆ ಟೋಲ್ ಸಂಗ್ರಹ ಆರಂಭವಾಗಿದೆ. ಕಾರು, ಜೀಪ್, ವ್ಯಾನ್‌ಗಳಿಗೆ ಏಕಮುಖ ಸಂಚಾರಕ್ಕೆ 135 ರೂ. ಯಾದರೆ, ದ್ವಿಮುಖ ಸಂಚಾರಕ್ಕೆ 205 ರೂ. ಯಾಗುತ್ತದೆ. ಸ್ಥಳೀಯ ವಾಹನಗಳಿಗೆ 70 ರೂ. ಹಾಗೂ ತಿಂಗಳ ಪಾಸ್ 4,525 ರೂ. ಇದೆ. ಲಘು ವಾಹನ, ಮಿನಿಬಸ್‌ಗಳಿಗೆ ಏಕಮುಖ ಸಂಚಾರಕ್ಕೆ 220 ರೂ. ಇದ್ದು, ದ್ವಿಮುಖ ಸಂಚಾರಕ್ಕೆ 330 ರೂ. ಇದೆ. ಸ್ಥಳೀಯ ವಾಹನಗಳಿಗೆ 110 ರೂ. ಇದ್ದು, ತಿಂಗಳ ಪಾಸ್ 7,315 ರೂ. ಇದೆ. ಬಸ್ ಹಾಗೂ ಟ್ರಕ್‌ಗಳ ಏಕಮುಖ ಸಂಚಾರಕ್ಕೆ 460 ರೂ, ದ್ವಿಮುಖ ಸಂಚಾರಕ್ಕೆ 690 ರೂ. ಇದೆ. ಸ್ಥಳೀಯ ವಾಹನಗಳಿಗೆ 230 ರೂ. ಇದ್ದು, ಮಾಸಿಕ ಪಾಸ್ 15,325 ರೂ. ಇದೆ.

ಮೂರು ಆಕ್ಸೆಲ್ ವಾಹನಗಳಿಗೆ ಏಕಮುಖ ಸಂಚಾರಕ್ಕೆ 500ರೂ., ದ್ವಿಮುಖ ಸಂಚಾರಕ್ಕೆ 750 ರೂ. ಸ್ಥಳೀಯ ವಾಹನಗಳಿಗೆ 250 ರೂ. ಹಾಗೂ ತಿಂಗಳ ಪಾಸ್‌ಗೆ 16,715 ರೂ. ನಿಗದಿಯಾಗಿದೆ. ಭಾರೀ ನಿರ್ಮಾಣ ವಾಹನಗಳಿಗೆ ಏಕಮುಖ ಸಂಚಾರಕ್ಕೆ 720 ರೂ. ಇದ್ದು, ದ್ವಿಮುಖ ಸಂಚಾರಕ್ಕೆ 1,080 ಇದೆ. ಸ್ಥಳೀಯ ವಾಹನಗಳಿಗೆ 360 ರೂ. ಹಾಗೂ ತಿಂಗಳ ಪಾಸ್‌ಗೆ 24,030 ರೂ. ಇದೆ. ಅತಿ ಗಾತ್ರದ ವಾಹನಗಳ ಏಕಮುಖ ಸಂಚಾರಕ್ಕೆ 880 ರೂ., ದ್ವಿಮುಖ ಸಂಚಾರಕ್ಕೆ 1,315 ರೂ, ಸ್ಥಳೀಯ ವಾಹನಗಳಿಗೆ 440 ರೂ. ಹಾಗೂ ತಿಂಗಳ ಪಾಸ್‌ಗೆ 29,255 ರೂ. ಇದೆ.

ಯಾವ್ಯಾವ ವಾಹನಗಳಿಗೆ ಪ್ರವೇಶ?
ಹೆದ್ದಾರಿ ಪ್ರಾಧಿಕಾರದ ನಿಯಮದ ಪ್ರಕಾರ ಈ ಹೆದ್ದಾರಿಯಲ್ಲಿ ಬೈಕ್, ಆಟೋ, ಟ್ರ್ಯಾಕ್ಟರ್‌ಗಳ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಎಕ್ಸ್‌ಪ್ರೆಸ್ ವೇನಲ್ಲಿ ಅಪಘಾತ ತಪ್ಪಿಸಲು ಈ ಕ್ರಮವನ್ನು ಕೈಗೊಳ್ಳಲಾಗಿದೆ. ನಿರ್ದಿಷ್ಟ ವೇಗ, ಸುರಕ್ಷತೆ ಹಾಗೂ ಯಾವುದೇ ಅಡೆ-ತಡೆ ಇಲ್ಲದೇ ಪ್ರಯಾಣಿಸಲು ಈ ಹೆದ್ದಾರಿ ನಿರ್ಮಿಸಲಾಗಿದೆ. ಆದರೆ ಸರ್ವಿಸ್ ರಸ್ತೆ ನಿರ್ಮಾಣ ಆಗುವವರೆಗೂ ಆಟೋ ಹಾಗೂ ಬೈಕ್‌ಗಳಿಗೆ ದಶಪಥ ಹೆದ್ದಾರಿಯಲ್ಲಿ ಸಂಚರಿಸಲು ಅವಕಾಶವಿದೆ. ಸರ್ವಿಸ್ ರಸ್ತೆ ನಿರ್ಮಾಣವಾದ ಬಳಿಕ ಬೈಕ್ ಆಟೋ ಟ್ರ್ಯಾಕ್ಟರ್‌ಗಳು ಈ ರಸ್ತೆಯಲ್ಲಿ ಪ್ರವೇಶಿಸುವಂತಿಲ್ಲ. ಸರ್ವಿಸ್ ರಸ್ತೆಯ ಕಾಮಗಾರಿ ಇನ್ನೂ ಪೂರ್ಣಗೊಂಡಿರದ ಕಾರಣ ಹೆದ್ದಾರಿಯಲ್ಲಿ ಬೈಕ್, ಆಟೋ ಸಂಚಾರಕ್ಕೆ ಅವಕಾಶ ಇದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಗೊಂದಲವಿದೆ.

 

Share. Facebook Twitter WhatsApp Pinterest LinkedIn Tumblr Telegram Email

Related Posts

ಮುದ್ದೇನಹಳ್ಳಿಗೆ ಮೋದಿ ಭೇಟಿ ಹಿನ್ನೆಲೆ: ಇಂದಿನಿಂದ ನಂದಿಗಿರಿಧಾಮಕ್ಕೆ ಪ್ರವೇಶ ನಿಷೇಧ.!

March 24, 2023

ಯಡಿಯೂರಪ್ಪ ಭೇಟಿ ಮಾಡಲು ಕಾವೇರಿ ನಿವಾಸಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ

March 24, 2023

ಕೋಲಾರ, ವರುಣಾ ಅಲ್ಲ – ಬಾದಾಮಿಯಿಂದ ಸಿದ್ದರಾಮಯ್ಯ ಸ್ಪರ್ಧೆ?

March 24, 2023

ಬಿಜೆಪಿಯತ್ತ ರೋಷನ್ ಬೇಗ್ ಪುತ್ರ ರುಮಾನ್ ಬೇಗ್ ಚಿತ್ತ! ಶಿವಾಜಿನಗರದಿಂದ ಕಣಕ್ಕಿಳಿಯಲು ಪ್ಲ್ಯಾನ್

March 24, 2023

ಕಾಂಗ್ರೆಸ್ ಆಪರೇಷನ್ ಗೆ ಬಿಜೆಪಿ ವಿಲವಿಲ: BSY ನಂಬಿ ಬಂದಿದ್ದ ವಲಸಿಗರಲ್ಲಿ ಆತಂಕ!

March 24, 2023

ಕೆಂಪೇಗೌಡರು ಕಟ್ಟಿರುವ ಬೆಂಗಳೂರು ಹೆಸರು ಉಳಿಸುವುದು ನಮ್ಮ ಕರ್ತವ್ಯ: ಸಿಎಂ ಬೊಮ್ಮಾಯಿ

March 24, 2023
Stay In Touch
  • Facebook
  • Instagram
  • YouTube
© 2023 Prajatvkannada . Designed by Prajatvkannada .
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Type above and press Enter to search. Press Esc to cancel.