ವಿಜಯನಗರ ;- ಅವರೆಲ್ಲರೂ ನಿನ್ನೆಯಷ್ಟೆ ಬಕ್ರಿದ್ ಹಬ್ಬ ಮುಗಿದ ಸಂಭ್ರಮದಲ್ಲಿದ್ರು. ಇನ್ನೇನು ಹಬ್ಬ ಮುಗಿತು ಮತ್ತೆ ಸೋಮವಾರ ದಿಂದ ಮಕ್ಕಳೆಲ್ಲ ಶಾಲೆ, ಕಾಲೇಜು ಹಾಸ್ಟೆಲ್ ಎಂದು ಹೊರಗಡೆ ಹೋಗ್ತಾರೆ ಅಷ್ಟರಲ್ಲಿ ಒಂದೊಳ್ಳೆ ಟ್ರಿಪ್ಗೆ ಹೋಗಿ ಬಂದ್ರಾಯ್ತು ಎಂದು ಬಳ್ಳಾರಿಯ ಕೌಲ್ ಬಜಾರ್ನಿಂದ 19 ಜನರು ಎರಡು ಆಟೋದಲ್ಲಿ ಹೊಸಪೇಟೆ ಬಳಿಯ ಟಿಬಿ ಡ್ಯಾಂಗೆ ಹೊರಟಿದ್ರು. ಇನ್ನೊಂದು ಹತ್ತು ಕಿ.ಮೀ. ದಾಟಿದ್ರೇ ಟಿಬಿ ಡ್ಯಾಂ ತಲುಪುತ್ತಿದ್ರು. ಆದ್ರೇ, ಯಮನಂತೆ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿದ್ದ 19 ಜನರ ಪೈಕಿ ಏಳು ಜನರು ಸಾವನ್ನಪ್ಪಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ.
ನಿನ್ನೆ ರಾಜ್ಯದ್ಯಾಂತ ಬಕ್ರಿದ್ ಹಬ್ಬದ ಸಂಭ್ರಮ, ಮುಸ್ಲಿಂ ಸಮುದಾಯದ ಜನರ ಖುಷಿಯಿನ್ನು ಇಮ್ಮಡಿ ಗೊಳಿಸಿತ್ತು. ತ್ಯಾಗ ಬಲಿದಾನದ ಸಂಕೇತವಾದ ಬಕ್ರಿದ್ ಹಬ್ಬದಲ್ಲಿ ಪ್ರಾಥನೆ, ಬಲಿದಾನ ಸೇರಿದಂತೆ ಭರ್ಜರಿ ಊಟವನ್ನು ಮಾಡಿ ಆ ಕಟುಂಬ ಸಂಭ್ರದಲ್ಲಿತ್ತು. ಇನ್ನೆನು ಗುರುವಾರ ಹಬ್ಬ ಮುಗಿತು. ಇನ್ನೇರೆಡು ದಿನಗಳಲ್ಲಿ ಮನೆಯಲ್ಲಿರೋ ಮಕ್ಕಳು ಸೋಮವಾರದಿಂದ ಶಾಲೆ ಕಾಲೇಜು ಹಾಸ್ಟೆಲ್ ಗೆ ತೆರಳುತ್ತಾರೆ. ಹೀಗಾಗಿ ಅಕ್ಕಪಕ್ಕದ ಮನೆವಯರು ಸೇರಿದಂತೆ ಒಟ್ಟು 19 ಜನರು ಹೊಸಪೇಟೆ ಬಳಿ ಇರೋ ಟಿ.ಬಿ. ಡ್ಯಾಂ ಗೆ ಹೋಗಿ ಒಂದು ದಿನದ ಪ್ರವಾಸ ಮಾಡಿದ್ರಾಯ್ತು ಎಂದು ಪ್ಲಾನ್ ಮಾಡಿ ಬಳ್ಳಾರಿಯ ಕೌಲ್ ಬಜಾರ್ ನಿಂದ ಬೆಳಿಗ್ಗೆ ಹೊರಟಿದ್ರು. ಹೊಸಪೇಟೆ ತಾಲೂಕಿನ ವಡ್ಡರ ಹಳ್ಳಿ ಬಳಿ ಬರುತ್ತಿದ್ದಂತೆ ರೈಲ್ವೇ ಓವರ್ ಬ್ರಿಜ್ ಬಳಿ ಬೃಹತ್ ಲಾರಿ ವೊಂದು ಹಿಂದೆ ಮುಂದೆ ಇದ್ದ ಎರಡು ಆಟೋಗಳಿಗೆ ಡಿಕ್ಕಿ ಹೊಡೆದಿದೆ ಪರಿಣಾಮ ಸ್ಥಳದಲ್ಲಿಯೇ ಐವರು ಮಹಿಳೆರು ಸೇರಿದಂತೆ ಒಟ್ಟು ಏಳು ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಖಾಸಿಂ, ಯಾಸ್ಮಿನ್, ಉಮೇಶ್, ಜಹೀರಾ, ಮತ್ತು ಶ್ಯಾಮ, ಸೇರಿದಂತೆ ಒಟ್ಟು ಐವರ ಹೆಸರು ಗುರುತಿಸಲಾಗಿದ್ದು, ಇನ್ನಿಬ್ಬರ ಹೆಸರು ಪತ್ತೆಯಾಗಿಲ್ಲ
ಇನ್ನೂ ವಿಷಯ ತಿಳಿಯುತ್ತಿದ್ದಂತೆ ಹೊಸಪೇಟೆ ಗ್ರಾಮೀಣ ಠಾಣೆ ಪೊಲೀಸರು ಸೇರಿದಂತೆ ಸ್ಥಳೀಯರು ಕಂದಕದಲ್ಲಿ ಬಿದ್ದ ಎರಡು ಆಟೋಗಳನ್ನು ಮೇಲೆತ್ತಿ ಗಾಯಾಳುಗಳನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ಸೇರಿದ್ದಾರೆ.
ಅಷ್ಟ್ರಲ್ಲಾಗಲೇ ಏಳು ಜನರು ಸಾವನ್ನಪ್ಪಿದ್ರು. ಉಳಿತದ 12 ಜನರ ಪೈಕಿ ಗಂಭೀರವಾಗಿರೋ ನಾಲ್ವರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಮತ್ತು ಇನ್ನೂಳಿದ ಎಂಟು ಜನರಿಗೆ ಹೊಸಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಮಧ್ಯೆ ಸ್ಥಳೀಯ ಶಾಸಕ ಗವಿಯಪ್ಪ ಸೇರಿದಂತೆ ಬಳ್ಳಾರಿ ವಲಯದ ಐಜಿಪಿ ಲೋಕೇಶ್ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವನ ನೀಡಿದ್ರು. ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಬಳ್ಳಾರಿ ಉಸ್ತುವಾರಿ ಸಚಿವ ನಾಗೇಂದ್ರ ಮೃತ 7 ಜನರಿಗೆ ಎರಡು ಲಕ್ಷ ಮತ್ತು ಗಾಯಾಳುಗಳಿಗೆ ಐವತ್ತು ಸಾವಿರ ಪರಿಹಾರವನ್ನು ಘೋಷಣೆ ಮಾಡಿದ್ದಾರೆ.
ಮೇಲ್ನೋಟಕ್ಕೆ ಘಟನೆಯಲ್ಲಿ ಬೃಹತ್ ಲಾರಿ ಚಾಲಕನ ತಪ್ಪೆಂದು ಗೊತ್ತಾಗಿದೆ. ರೈಲ್ವೇ ಓವರ್ ಬ್ರಿಜ್ ಮೇಲೆ ಪ್ರಯಾಣ ಮಾಡುವಾಗ ನಿಯಂತ್ರಣ ತಪ್ಪಿ ಅತಿಯಾದ ವೇಗದಿಂದ ಬಂದಿರೋದೇ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಈ ಕುರಿತು ಹೊಸಪೇಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಾರಿಯಾದ ಲಾರಿ ಚಾಲಕನಿಗಾಗಿ ಹುಡುಕಾಟ ನಡೆಸಿದ್ದು, ತನಿಖೆ ಮುಂದುವರೆದಿದೆ.