ದರೋಡೆಕೋರ ಕುದುರೆ ಏರಿ ಬಂದು ಮಹಿಳೆಯ ಬ್ಯಾಗ್ ಕಿತ್ತುಕೊಂಡು ಓಡಿ ಹೋಗಿದ್ದಾನೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (trending news) ಆಗುತ್ತಿದ್ದು, ಇದನ್ನು ನೋಡಿ ಜನರು ಕೂಡ ಅಚ್ಚರಿಗೊಂಡಿದ್ದಾರೆ. ಇನ್ನು ಬಹುತೇಕ ಕಳ್ಳರು, ದರೋಡೆಕೋರರು ಬೈಕ್ನಲ್ಲಿ ಬಂದು ದಾರಿಯಲ್ಲಿ ಜನರನ್ನು ಲೂಟಿ ಮಾಡಿ ಓಡಿಹೋಗುತ್ತಾರೆ. ಆದರೆ ಈ ಯುಗದಲ್ಲೂ ಯಾರಾದರೂ ಕುದುರೆ ಸವಾರಿ ಮಾಡಿಕೊಂಡು ಬಂದು ದರೋಡೆ ಮಾಡುವುದನ್ನು ನೀವು ನೋಡಿದ್ದೀರಾ? ಅಂದಹಾಗೆ ಬಹಳ ಹಿಂದೆ ದೊಡ್ಡ ದೊಡ್ಡ ಗ್ಯಾಂಗ್ಸ್ಟರ್ಗಳು ಕುದುರೆಗಳಲ್ಲಿ (horse) ಹಿಂಡುಹಿಂಡಾಗಿ ಬಂದು ದರೋಡೆ ಮಾಡಿಕೊಂಡು ಹೋಗುತ್ತಿದ್ದರು. ಇದನ್ನು ಸಿನಿಮಾಗಳಲ್ಲಿಯೂ ನೀವು ನೋಡಿರುತ್ತೀರಿ.
ಆದರೆ ಇತ್ತೀಚೆಗೆ ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಜನರಲ್ಲಿ ಅಚ್ಚರಿ ಮೂಡಿಸಿದೆ. ಕಳ್ಳನೊಬ್ಬ ಕುದುರೆ ಸವಾರಿ ಮಾಡಿಕೊಂಡು ಬಂದು ನಿರ್ಜನ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯನ್ನು ಲೂಟಿ ಮಾಡಿ ಆರಾಮವಾಗಿ ಹಿಂದಿರುಗುತ್ತಾನೆ. ರಾತ್ರಿಯ ಸಮಯ ಮತ್ತು ಮಹಿಳೆಯೊಬ್ಬರು ನಿರ್ಜನ ಪ್ರದೇಶದಿಂದ ನಡೆದುಹೋಗುತ್ತಿರುತ್ತಾರೆ. ಇದನ್ನು ವೀಡಿಯೊದಲ್ಲಿ ನೀವು ನೋಡಬಹುದು. ಅಷ್ಟರಲ್ಲಿ ಕುದುರೆ ಸವಾರಿ ಮಾಡುವ ವ್ಯಕ್ತಿ ಅಲ್ಲಿಗೆ ತಲುಪುತ್ತಾನೆ. ಅವನನ್ನು ನೋಡಿದ ಮಹಿಳೆ ಹಿಂದೆ ತಿರುಗಿ ಓಡಿಹೋಗಲು ಪ್ರಯತ್ನಿಸುತ್ತಾಳೆ.
ಆದರೆ ಕಳ್ಳ ಓಡಿಹೋಗುವ ಅವಕಾಶವನ್ನು ನೀಡಲಿಲ್ಲ. ಅವನು ಬಲವಂತವಾಗಿ ಮಹಿಳೆಯಿಂದ ಅವಳ ಚೀಲವನ್ನು ಕಸಿದುಕೊಂಡು ಆರಾಮವಾಗಿ ಅಲ್ಲಿಂದ ತಪ್ಪಿಸಿಕೊಳ್ಳುತ್ತಾನೆ ಮತ್ತು ಮಹಿಳೆ ಅಸಹಾಯಕರಾಗಿ ನೋಡುತ್ತಲೇ ಇರುತ್ತಾಳೆ. ಈ ಘಟನೆ ನಿಜವೋ ಅಥವಾ ಸ್ಕ್ರಿಪ್ಟ್ ಆಗಿದೆಯೋ ತಿಳಿದಿಲ್ಲ. ಆದರೆ ಈ ಸಂಪೂರ್ಣ ಘಟನೆಯ ವೀಡಿಯೊ ರಸ್ತೆ ಬದಿ ಕಂಬದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ತೋರುತ್ತದೆ. ಅದು ತಕ್ಷಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆಯೂ ಯಾವುದೇ ಮಾಹಿತಿ ಸಿಕ್ಕಿಲ್ಲ.