ಬಿಹಾರ;- ಇಲ್ಲಿನ ಬಕ್ಸರ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮೂರು ದಶಕಗಳ ನಂತರ ಕಳ್ಳನೊಬ್ಬನನ್ನು ಅರೆಸ್ಟ್ ಮಾಡಿದ್ದಾರೆ.
ಇತ್ತೀಚೆಗೆ ನಡೆದ ಅಪರಾಧ ಸಭೆಯಲ್ಲಿ ಎಸ್ಪಿ ಛೀಮಾರಿ ಹಾಕಿದ್ದ ಬೆನ್ನಲ್ಲೆ, 1990ರಲ್ಲಿ ಹಲವಾರು ಕಳ್ಳತನದ ಘಟನೆಗಳನ್ನು ನಡೆಸಿ ತಲೆಮರೆಸಿಕೊಂಡಿದ್ದ ಕಳ್ಳನನ್ನು ಮೂರು ದಶಕಗಳ ಬಳಿಕ ಪೊಲೀಸರು ಬಿಹಾರದ ಬಕ್ಸರ್ನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯ ವಿರುದ್ಧ ಹಲವು ವರ್ಷಗಳವರೆಗೆ ರೆಡ್ ವಾರಂಟ್ ಜಾರಿ ಮಾಡಲಾಗಿತ್ತು. ತಲೆಮರೆಸಿಕೊಂಡಿದ್ದ ಕಳ್ಳನನ್ನು 33 ವರ್ಷಗಳ ಬಳಿಕ ನಾಟಕೀಯ ರೀತಿಯಲ್ಲಿ ಆತನ ಮನೆಯಲ್ಲೇ ಬಂಧಿಸಿರುವ ಘಟನೆ ಜಿಲ್ಲೆಯ ದುಮ್ರಾವ್ ಉಪವಿಭಾಗದ ಕೃಷ್ಣಬ್ರಹ್ಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.