ಕೇರಳ ಕಣ್ಣೂರು ಜಿಲ್ಲೆಯ ಛೆಂಗಲೈ ಎಂಬಲ್ಲಿ ಇರುವ ಸರ್ಕಾರಿ ಶಾಲೆಯ ಆವರಣದಲ್ಲಿ ಇದ್ದ ರಬ್ಬರ್ ತೋಟದಲ್ಲಿ ಇಂಗು ಗುಂಡಿಯನ್ನು ತೆಗೆಯುತ್ತಿದ್ದಾಗ ಈ ಅಪರೂಪದ ನಿಧಿ ಕಾರ್ಮಿಕರಿಗೆ ಸಿಕ್ಕಿದೆ. ಆರಂಭದಲ್ಲಿ ಹೊಳೆಯುತ್ತಿದ್ದ ಈ ನಿಧಿಯನ್ನು ನೋಡಿದ ಕಾರ್ಮಿಕರು ಬಾಂಬ್ ಆಗಿರಬಹುದು ಎಂದು ಆತಂಕಗೊಂಡಿದ್ದಾರೆ.
ಆದರೆ ನಿಧಿ ಇದ್ದ ಮಡಕೆ ಒಡೆದಾಗ ಅದರಲ್ಲಿ ಚಿನ್ನ ಹಾಗೂ ಬೆಳ್ಳಿ ನಾಣ್ಯಗಳು ಇರುವುದು ಗೊತ್ತಾಗಿದೆ.
ಇದರಲ್ಲಿ ಒಟ್ಟು 177 ಮುತ್ತಿನ ಮಣಿಗಳು, 13 ಚಿನ್ನದ ಪದಕಗಳು, ಹಾಗೂ ಕಾಶಿ ಮಾಲಾ ಎಂದು ಕರೆಯಲಾಗುವ ಸಾಂಪ್ರದಾಯಿಕ ಆಭರಣದ ಭಾಗವೆಂದು ನಂಬಲಾಗಿರುವ ಇನ್ನೂ 4 ಪದಕಗಳು ಸಿಕ್ಕಿವೆ. ಇದರ ಜೊತೆಗೆ ಕಿವಿಯೋಲೆ ಉಂಗುರ ಹಾಗೂ ಬೆಳ್ಳಿ ನಾಣ್ಯಗಳ ಒಂದು ಸೆಟ್ ಪತ್ತೆಯಾಗಿದೆ. ಮಳೆನೀರಿನ ಮರುಪೂರಣಕ್ಕಾಗಿ ಹೊಂಡ ತೋಡುತ್ತಿದ್ದ ಕಾರ್ಮಿಕರಲ್ಲಿ ಒಬ್ಬರಾದ ಆಯೇಷಾ ಎಂಬುವವರಿಗೆ ಇದು ಮೊದಲಿಗೆ ಕಾಣಿಸಿದೆ.