ಮಧ್ಯಪ್ರದೇಶ :ಇಂದು ವಿಶ್ವ ಜನಸಂಖ್ಯಾ ದಿನಾಚರಣೆ ವಿಶೇಷ. ಆದರೆ ಈ ವಿಶೇಷ ದಿನದಂದು 35 ವರ್ಷದ ತಾಯಿಯೊಬ್ಬಳು 10ನೇ ಮಗುವಿಗೆ ಜನ್ಮ ನೀಡಿದ ಘಟನೆ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಜುಗ್ತಿ ಬಾಯಿ ಎಂಬ ಬೈಗಾ ಬುಡಕಟ್ಟು ಜನಾಂಗದ ಮಹಿಳೆ 10ನೇ ಮಗುವಿನ ಜನ್ಮ ನೀಡಿದ್ದಾಳೆ. ಆದರೆ ಅಚ್ಚರಿ ಸಂಗತಿ ಏನೆಂದರೆ ಜುಗ್ತಿ ಬಾಯಿ ಅವರ ಮೊದಲ ಮಗಳಿಗೆ 22 ವರ್ಷ ವಯಸ್ಸಾಗಿದ್ದು, ಆಕೆಗೆ 13ನೇ ವರ್ಷ ವಯಸ್ಸಿರುವಾಗ ಮೊದಲ ಮಗಳು ಜನಿಸಿದಳಂತೆ.
ಮೊಹಗಾಂವ್ ನಿವಾಸಿ ಅಕ್ಲು ಸಿಂಗ್ ಮರಾವಿ ಅವರ ಪತ್ನಿ ಜುಗ್ತಿ ಬಾಯಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರ ಕುಟುಂಬ ಬಿರ್ಸಾ ಆಸ್ಪತ್ರೆಗೆ ಸಾಗಿಸಿದರು. ಆದರೆ ಅಲ್ಲಿಂದ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು.
ಕೊನೆಗೆ ಜಿಲ್ಲಾ ಆಸ್ಪತ್ರೆಯ ವೈದ್ಯೆ ಅರ್ಚನಾ ಲಿಲ್ಹರೆ ಆಕೆಗೆ ಆಪರೇಷನ್ ಮಾಡಿ ಹೆರಿಗೆ ಮಾಡಿಸಿದ್ದಾರೆ. ಜುಗ್ತಿ ಬಾಯಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾರೆ.