ಬೆಂಗಳೂರು:- ಕೆಆರ್ ಪುರಂನಲ್ಲಿ ನಡೆದಿದ್ದ ಮಗನಿಂದ ತಾಯಿ ಕೊಲೆಗೆ ಟ್ವಿಸ್ಟ್ ಸಿಕ್ಕಿದೆ. ಪೊಲೀಸರ ತನಿಖೆ ವೇಳೆ ಈ ಕೊಲೆಯಲ್ಲಿ ತಂದೆಯೂ ಶಾಮೀಲಾಗಿದ್ದ ಅಂಶ ಬಯಲಾಗಿದೆ.
ಕೊಲೆಗೆ ಬಳಸಲಾಗಿದ್ದ ರಾಡ್ನಲ್ಲಿ 2 ರೀತಿಯ ಫಿಂಗರ್ ಪ್ರಿಂಟ್ ಪತ್ತೆಯಾಗಿದ್ದು ತಂದೆ-ಮಗ ಸೇರಿಕೊಂಡು ಮಹಿಳೆಯನ್ನು ಕೊಲೆ ಮಾಡಿರುವುದು ಬಯಲಾಗಿದೆ.
ಫೆಬ್ರವರಿ 2ರಂದು ಕೆ.ಆರ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ನಡೆದಿತ್ತು. ಕ್ಷುಲ್ಲಕ ವಿಚಾರಕ್ಕೆ ತಾಯಿಯೊಂದಿಗೆ ಜಗಳವಾಡಿದ ಮಗ ರಾಡಿನಿಂದ ಹೊಡೆದು ಕೊಲೆ ಮಾಡಿದ್ದ. ಕೊಲೆಯ ತನಿಖೆ ನಡೆಸಿದ ಪೊಲೀಸರಿಗೆ ಮತ್ತೋರ್ವ ಕೊಲೆ ಆರೋಪಿ ಇರುವುದು ಬಯಲಾಗಿದೆ. ಕೊಲೆಗೆ ಬಳಸಲಾಗಿದ್ದ ರಾಡ್ ಮೇಲೆ 2 ರೀತಿಯ ಫಿಂಗರ್ ಪ್ರಿಂಟ್ಗಳು ಪತ್ತೆಯಾಗಿದ್ದವು. ಇದರಿಂದ ಅನುಮಾನಗೊಂಡ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದರು. ಆಗ ರಾಡ್ ನ ಎಫ್ಎಸ್ಎಲ್ಗೆ ಕಳುಹಿಸಿದಾಗ ರಾಡ್ ಮೇಲೆ ಇರುವುದು ಮಗ ಹಾಗೂ ತಂದೆಯ ಫಿಂಗರ್ ಪ್ರಿಂಟ್ ಎಂಬುವುದು ಬಯಲಾಗಿದೆ
ವಿಚಾರ ತಿಳಿಯುತ್ತಿದ್ದಂತೆ ಕೊಲೆಯಾದ ನೇತ್ರಾಳ ಗಂಡ ಚಂದ್ರಪ್ಪನನ್ನು ಕೆ.ಆರ್. ಪುರಂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ಕೊಲೆಯ ಸತ್ಯ ಬಯಲಾಗಿದೆ.
ವಿಚಾರಣೆ ಮಾಡಿದಾಗ ಆರೋಪಿ ಕೊಲೆಗೆ ನಿಖರ ಕಾರಣ ಬಾಯಿಬಿಟ್ಟಿದ್ದಾರೆ. ಕೊಲೆಯಾದ ನೇತ್ರಾಳಿಗೆ ಅಕ್ರಮ ಸಂಬಂಧದ ಜೊತೆಗೆ ಕುಡಿತದ ಚಟ ಇತ್ತು. ಕೆಲವೊಮ್ಮೆ ಎರಡು ಮೂರು ದಿನಗಳ ಕಾಲ ಮನೆಗೆ ಬರ್ತಾ ಇರಲಿಲ್ಲ. ನಾವು ಊಟ ಇಲ್ಲದೆ ಉಪವಾಸ ಇರ್ತಾ ಇದ್ವಿ, ಕೇಳಿದ್ರೆ ನಮ್ಮ ಮೇಲೆಯೇ ಬಾಯಿ ಮಾಡ್ತಾ ಇದ್ದಳು. ಹೀಗಾಗಿ ಮಗನ ಜೊತೆ ಸೇರಿ ಕೊಲೆ ಮಾಡಲು ನಿರ್ಧಾರ ಮಾಡಿದೆ ಎಂದು ಚಂದ್ರಪ್ಪ ಬಾಯ್ಬಿಟ್ಟಿದ್ದಾರೆ.
ಇನ್ನು ಅಪ್ಪ-ಮಗ ಸೇರಿಕೊಂಡು ತಾಯಿಯ ಕೊಲೆ ಮಾಡಿದ್ದಾರೆ. ಕೊಲೆ ಆದ ಬಳಿಕ ತಂದೆಯ ಬಗ್ಗೆ ಯೋಚನೆ ಮಾಡಿದ್ದ ಅಪ್ರಾಪ್ತ ಮಗ, ತಂದೆ ಜೈಲಿಗೆ ಹೋಗೋದು ಬೇಡ ಎಂದು ಕೊಲೆಯನ್ನ ತನ್ನ ಮೇಲೆಯೇ ಹಾಕಿಕೊಂಡಿದ್ದಾನೆ. ತಂದೆ ರಾಡ್ ನಿಂದ ಹೊಡೆದ ಬಳಿಕ ಮಗನೂ ಒಂದೆರಡು ಏಟು ಹೊಡೆದಿದ್ದಾನೆ. ಸತ್ತಿರೋದು ಕನ್ಫರ್ಮ್ ಆದ ಬಳಿಕ ಚಂದ್ರಪ್ಪ ಅಲ್ಲಿಂದ ಎಸ್ಕೇಪ್ ಆಗಿದ್ದ ಎನ್ನಲಾಗಿದೆ.