ಮಹಿಳೆಯೊಬ್ಬಳು ತನ್ನ ಮದುವೆಯ ಫೋಟೋಗಳನ್ನು ಸೆರೆಹಿಡಿದಿದ್ದ, ಫೋಟೋಗ್ರಾಫರ್ ಗೆ ಸುಮಾರು ನಾಲ್ಕು ವರ್ಷಗಳ ನಂತರ ವಾಟ್ಸ್ಆಪ್ ಮೆಸೆಜ್ ಮಾಡಿ ಸಂಪರ್ಕಿಸಿದಳು. ಮತ್ತು ತನ್ನ ವಿಚ್ಛೇದನದ ಬಗ್ಗೆ ಹೇಳಿ ಫೋಟೋಗಳಿಗೆ ತೆಗೆದುಕೊಂಡ ಹಣವನ್ನು ಮರುಪಾವತಿ ಮಾಡುವಂತೆ ಕೇಳಿದ್ದಾಳೆ. ಛಾಯಾಗ್ರಾಹಕ ಮತ್ತು ಈಕೆಯ ವಾಟ್ಸಾಪ್ ಸಂಭಾಷನೆಯ ಸ್ಕಿನ್ ಶಾಟ್ಗಳನ್ನು ಛಾಯಾಗ್ರಾಹರ ಲ್ಯಾನ್ಸ್ ರೋಮಿಯೀ ತನ್ನ ಟ್ವಿಟರ್ ಖಾತೆಯನ್ನು ಹಂಚಿಕೊಂದ್ದು, ಇದು ಈಗ ವೈರಲ್ ಆಗಿದೆ.
ಹೌದು ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬರು ತನ್ನ ಮದುವೆಯ ಫೋಟೋಗಳನ್ನು ತೆಗೆದ ಛಾಯಾಗ್ರಾಹಕ, ತನಗೆ ಹಣವನ್ನು ವಾಪಸ್ ನೀಡಬೇಕು ಎಂದು ಕೇಳಿದ್ದಾರೆ. ‘ನಾನು ಈಗ ವಿಚ್ಛೇದನವನ್ನು ಪಡೆದಿದ್ದೇನೆ. ಮತ್ತು ನನ್ನ ಮದುವೆಯ ದಿನದ ಫೋಟೋಗಳು ಇನ್ನು ಮುಂದೆ ನನಗೆ ಮತ್ತು ನನ್ನ ಮಾಜಿ ಪತಿಗೆ ಅಗತ್ಯವಿಲ್ಲ” ಎಂದು ಮಹಿಳೆ ಜೋಹಾನ್ಸ್ ಬರ್ಗ್ ಮೂಲದ ಫೋಟೋಗ್ರಾಫರ್ ಲ್ಯಾನ್ಸ್ ರೋಮಿಯೋಗೆ ಹೇಳಿದ್ದಾರೆ.
ಆರಂಭದಲ್ಲಿ ಮಹಿಳೆ ಸುಮ್ಮನೆ ಹೇಳುತ್ತಿದ್ದಾರೆ ಎಂದು ಭಾವಿಸಿದ ರೋಮಿಯೋ, ತಮಾಷೆ ಮಾಡುತ್ತಿದ್ದೀರಾ ಎಂದು ಮಹಿಳೆಗೆ ಕೇಳಿದ್ದಾರೆ. ಇಲ್ಲ ನಾನು ತುಂಬಾ ಗಂಭೀರವಾಗಿ ಹೇಳುತ್ತಿದ್ದೇನೆ ಎಂದು ಆಕೆ ಉತ್ತರಿಸಿದಳು. ಆಕೆಯ ವಿಚ್ಛೇದನಕ್ಕಾಗಿ ವಿಷಾದಿಸುತ್ತಾ, ನಾವು ನಮ್ಮ ಕೆಲಸ ಮಾಡಿದ ನಂತರ ಮತ್ತು ಫೋಟೋಗಳನ್ನು ಗ್ರಾಹಕರಿಗೆ ನೀಡಿದ ಬಳಿಕ ಹಣವನ್ನು ಹಿಂತಿರುಗಿಸಲು ಸಾಧ್ಯವಿಲ್ಲ.
ಛಾಯಾಗ್ರಹಣವು ಮರುಪಾವತಿಸಲಾಗದ ಸೇವೆಯಾಗಿದೆ ಎಂದು ರೋಮಿಯೋ ವಿವರಿಸುತ್ತಾರೆ. ಆದರೆ ಅವರ ಒಪ್ಪಂದದಲ್ಲಿ ಯಾವುದೇ ಮರುಪಾವತಿಗಳ ಬಗ್ಗೆ ತಿಳಿಸದ ಕಾರಣ 70% ಗಳಷ್ಟು ಹಣವನ್ನು ಮರಪಾವತಿ ಮಾಡಬಹುದಲ್ವಾ ಎಂದು ಮಹಿಳೆ ಒತ್ತಾಯಿಸಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಹಣವನ್ನು ಮರುಪಾವತಿ ಮಾಡಲಾಗುವುದಿಲ್ಲ ಎಂದು ಹೇಳಿದ ರೋಮಿಯೋಗೆ ಮಹಿಳೆ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಬೆದರಿಕೆ ಹಾಕಿದದ್ದಳು.
ಈ ವಾಟ್ಸ್ಆಪ್ ಸಂಭಾಷಣೆಯ ಸ್ಕ್ರಿನ್ ಶಾಟ್ ಗಳು ವೈರಲ್ ಆಗುತ್ತಿದ್ದಂತೆ, ಆ ಮಹಿಳೆಯ ಮಾಜಿ ಪತಿ ಫೋಟೋಗ್ರಾಪರ್ ರೋಮಿಯೋರನ್ನು ಸಂಪರ್ಕಿಸಿದ್ದು, ಆತ ‘ನಾನು ವೈರಲ್ ಸಂದೇಶಗಳನ್ನು ಓದಿದ್ದೇನೆ. ನಾನು ಆಕೆಯ ಪರವಾಗಿ ನಿಮ್ಮ ಬಳಿ ಕ್ಷಮೆಯಾಚಿಸುತ್ತೇನೆ. ಇದು ಮುಜುಗರದ ಸಂಗತಿ ಎಂದು ಹೇಳಿದ್ದಾನೆ. ಏಪ್ರಿಲ್ 11 ರಂದು ಇದನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಲಾಗಿದ್ದು, ಈವರೆಗೆ 15.9k ವೀಕ್ಷಣೆಯನ್ನು ಪಡೆದುಕೊಂಡಿದೆ.