ಬೆಂಗಳೂರು:- ಮೆಟ್ರೋ ನಿಲ್ದಾಣದಲ್ಲಿ ಆರೈಕೆ ಕೇಂದ್ರ ಸ್ಥಾಪಿಸುವಂತೆ BMRCLಗೆ ಮಹಿಳಾ ಆಯೋಗ ಪತ್ರ ಬರೆದಿದೆ. ಎರಡು ದಿನದ ಹಿಂದಷ್ಟೇ ಮೆಟ್ರೋ ನಿಲ್ದಾಣದಲ್ಲಿ ತಾಯಿಯೊಬ್ಬಳು ಮಗುವಿಗೆ ಹಾಲುಣಿಸಲು ಪರದಾಡಿದ್ದ ಘಟನೆ ಸುದ್ದಿಯಾದ ಬೆನ್ನಲ್ಲೇ ಮಹಿಳಾ ಆಯೋಗ ಪತ್ರ ಬರೆದಿದೆ.
ಸೋಮವಾರ ಟ್ರಿನಿಟಿ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದ ತಾಯಿ ತನ್ನ ಮಗುವಿಗೆ ಹಾಲುಣಿಸಲು ಮೆಟ್ರೋ ನಿಲ್ದಾಣದ ಒಳಭಾಗದಲ್ಲಿ ಪರದಾಡಿದ್ದರು. ಅಕ್ಕಪಕ್ಕದ ಗೋಡೆ ಮರೆಯಲ್ಲಿ ನಿಂತು, ನೆಲದ ಮೇಲೆ ಕೂತು ಪರದಾಡಿದ್ದ ಮಹಿಳೆ ವಿಡಿಯೋ ವೈರಲ್ ಆಗಿತ್ತು. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಆರೈಕೆ ಕೇಂದ್ರವಿದೆ. ಮೆಟ್ರೋ ನಿಲ್ದಾಣಗಳಲ್ಲಿ ಯಾಕೆ ಇಲ್ಲ ಎನ್ನುವ ಪ್ರಶ್ನೆ ಉದ್ಬವ ಆಗಿತ್ತು. ಈ ಬೆನ್ನಲ್ಲೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಬಿಎಂಆರ್ಸಿಎಲ್ ಎಂಡಿಗೆ ಪತ್ರ ಬರೆದು ಕೂಡಲೇ ಆರೈಕೆ ಕೇಂದ್ರ ಸ್ಥಾಪಿಸುವಂತೆ ಆಗ್ರಹಿಸಿದ್ದಾರೆ.
* ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಬಸ್ ನಿಲ್ದಾಣಗಳಲ್ಲಿ ಮಹಿಳೆಯರ ಆರೈಕೆ ಕೇಂದ್ರಗಳು ಈಗಾಗಲೇ ಇವೆ.
* ಆದರಂತೆ ನಮ್ಮ ಮೆಟ್ರೋದಲ್ಲಿ ಮಹಿಳೆಯ ಆರೈಕೆ ಕೇಂದ್ರ ಸ್ಥಾಪನೆ ಆಗಬೇಕು.
* ಸೆ.16 ರಂದು ತಾಯಿಯೊಬ್ಬಳು ಮಗುವಿಗೆ ಹಾಲುಣಿಸಲು ಮೆಟ್ರೋ ಸ್ಟೇಷನ್ನಲ್ಲಿ ಪರದಾಡುತ್ತಿರುವ ಸುದ್ದಿ ಪ್ರಸಾರವಾಗಿದೆ.
* ಪ್ರತಿ ಮೆಟ್ರೋ ನಿಲ್ದಾಣಗಳಲ್ಲಿ ಆರೈಕೆ ಕೇಂದ್ರ ನಿರ್ಮಿಸಲು ಕ್ರಮವಹಿಸುವಂತೆ ಪತ್ರದಲ್ಲಿ ಅಗ್ರಹಿಸಲಾಗಿದೆ.