ನಡುರಸ್ತೆಯಲ್ಲಿ ಮಹಿಳೆಯೊಬ್ಬರು ಸಂಪೂರ್ಣ ಬೆತ್ತಲಾಗಿ ಓಡಾಡಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಕಷ್ಟು ಜನಸಂದಣಿ ಇರುವ ರಸ್ತೆಯಲ್ಲಿ ಮಹಿಳೆ ಯಾರ ಭಯವಿಲ್ಲದೇ ಹೋಗುತ್ತಿರುವ 9 ಸೆಕೆಂಡ್ ವಿಡಿಯೋ ತುಣಕು ಭಾರೀ ಚರ್ಚೆಗೆ ಗ್ರಾಸವಾಗಿದೆ. ಉತ್ತರ ಪ್ರದೇಶದ ಗಾಜಿಯಾಬಾದ್ ನಗರದ ಪ್ರಮುಖ ರಸ್ತೆಯಲ್ಲಿ ಜೂನ್ 25ರಂದು ಈ ಘಟನೆ ನಡೆದಿದ್ದು ಮಹಿಳೆಯ ನಡೆಗೆ ಸಾಕಷ್ಟು ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ.
ಗಾಜಿಯಾಬಾದ್ ಸಿಟಿಯ ಮೋಹನ್ ನಗರದ ಚೌರ್ಹಾ ಪ್ರದೇಶದ ರಸ್ತೆಯಲ್ಲಿ ಬೆತ್ತಲಾದ ಮಹಿಳೆ ಕಾಣಿಸಿಕೊಂಡಿದ್ದು, ಯಾರು ಆಕೆಯನ್ನು ತಡೆಯಲು ಮುಂದಾಗಿಲ್ಲ. ರಸ್ತೆಯಲ್ಲಿ ಅಷ್ಟು ಜನರಿದ್ದರೂ ಮಹಿಳೆಯನ್ನು ಯಾರೊಬ್ಬರೂ ಸಹ ಪ್ರಶ್ನಿಸಲು ಮುಂದಾಗಿಲ್ಲ. ಮಹಿಳೆ ಬೆತ್ತಲಾಗಿ ಬಂದು ಮಿಂಚಿನಂತೆ ಮಾಯವಾದರು ಎಂದು ಹೇಳಲಾಗುತ್ತಿದೆ. ಮಹಿಳೆ ಸುತ್ತಲೂ ಸಾರ್ವಜನಿಕರು ನಿಂತಿರೋದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ.
ಹೀಗೆ ಜನರಿರುವ ಬೀದಿಯಲ್ಲಿ ಬೆತ್ತಲಾಗಿದೆ ಓಡಾಡಿದ ಮಹಿಳೆ ಯಾರು? ಬೆತ್ತಲಾಗಿ ನಡುರಸ್ತೆಯಲ್ಲಿ ಓಡಾಡಿದ್ಯಾಕೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಘಟನೆ ನಡೆದ ಎರಡು ದಿನಗಳ ಬಳಿಕ ಮಹಿಳೆಯ ವಿಡಿಯೋ ತುಣುಕುಗಳು ವೈರಲ್ ಆಗಿವೆ. ಈ ಬಗ್ಗೆ ಸ್ಥಳೀಯ ಪೊಲೀಸರಿಂದಲೂ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಈ ವಿಡಿಯೋ ಬಳಿಕ ಗಾಜಿಯಾಬಾದ್ ಕಾನೂನು ಸುವ್ಯವಸ್ಥೆಯ ಬಗ್ಗೆ ಚರ್ಚೆಗಳು ಶುರುವಾಗಿವೆ.
ಇದು ಮಹಿಳೆಯರ ರಕ್ಷಣೆಗೆ ಸಂಬಂಧಿಸಿದ ವಿಷಯವಾಗಿದೆ. ಹಾಗಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಹಿಳೆಯನ್ನು ಪತ್ತೆ ಮಾಡಬೇಕು. ಈ ಘಟನೆ ಹಿಂದಿನ ಕಾರಣವನ್ನು ತಿಳಿದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.