ಬೆಂಗಳೂರು: ನಗರದ ನಿರ್ಮಾಣ ಹಂತದ ಕಟ್ಟಡದ ಬಳಿ ಮಹಿಳೆ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಆಟೋಗಾಗಿ ಕಾಯುತ್ತಿದ್ದ ಮಹಿಳೆಯ ಪಿಕ್ ಮಾಡಿ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ.
ನಸುಕಿನ ಜಾವ ಅಪರಿಚಿತ ಮಹಿಳೆಯ ಕರೆತಂದು ಅತ್ಯಾಚಾರ ಎಸಗಿ ಕೊಲೆಗೈದ ಆಟೋ ಚಾಲಕ ಮುಬಾರಕ್ (38) ಕೊಲೆ ಆರೋಪಿಯಾಗಿದ್ದು ಕಳೆದ ತಿಂಗಳ 20ರಂದು ನಡೆದಿದ್ದ ಘಟನೆ, ತಡವಾಗಿ ಬೆಳಕಿಗೆ ಬಂದಿದೆ.
ಶಾಂತಿನಗರದ ಡಬಲ್ ರೋಡ್ ಜನತಾಕೋ ಆಪರೇಟಿವ್ ಕಟ್ಟಡದ ಬಳಿ ಪತ್ತೆಯಾಗಿದ್ದ ಶವ ಗುರುತು ಸಿಗದ ರೀತಿ ಮಹಿಳೆಯ ಶವ ಪತ್ತೆಯಾಗಿತ್ತು ಮೇಲ್ನೋಟಕ್ಕೆ ಕಟ್ಟಡದಿಂದ ಬಿದ್ದು ಮೃತಪಟ್ಟಂತೆ ಕಂಡಿತ್ತು. ಆದರೆ ಮೃತದೇಹ ಮರಣೊತ್ತರ ಪರಿಕ್ಷೆಗೆ ರವಾನೆ ಬಳಿಕ ಸತ್ಯ ಬಯಲಾಗಿದ್ದು ಮಹಿಳೆಯ ಬಲವಂತವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಿರೊದು ಪತ್ತೆಯಾಗಿತ್ತು.
ಇದರ ಜಾಡನ್ನು ಹಿಡಿದು ಪೊಲೀಸರು ತನಿಖೆ ನಡೆಸುತ್ತಿರುವಾಗಲೇ ತನಿಖೆ ಬಳಿಕ ಆಟೋ ಚಾಲಕ ಮುಬಾರಕ್ ಬಂಧನ ಬಂಧಿತನ ವಿಚಾರಣೆ ವೇಳೆ ಕೊಲೆಯ ಅಸಲಿ ಸಂಗತಿ ಬಯಲಾಗಿದೆ.
ಬೆಳಗಿನ ಜಾವ ಆಟೋಗಾಗಿ ಮಾರ್ಕೆಟ್ ಬಳಿ ನಿಂತಿದ್ದ ಮಹಿಳೆ ಈ ವೇಳೆ ಆಕೆಯ ಪಿಕ್ ಮಾಡಿ ಸಂಪಂಗಿರಾಮನಗರಕ್ಕೆ ಕರೆತಂದಿದ್ದ ಆಟೋ ಚಾಲಕ ಬಳಿಕ ಕಟ್ಟಡದ ಮೊದಲನೇ ಮಹಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ ಆರೋಪಿ ಬಳಿಕ ಆಕೆಯ ಕೊಲೆ ಮಾಡುವ ನಿರ್ಧರಿಸಿ ಕಟ್ಟಡದಿಂದ ತಳ್ಳಿರೊದಾಗಿ ಪೊಲೀಸರ ಮುಂದೆ ಸತ್ಯ ಒಪ್ಪಿಕೊಂಡ ಮುಬಾರಕ್
ಸದ್ಯ ಮೃತ ಮಹಿಳೆಯ ಗುರುತು ಪತ್ತೆ ಹಚ್ಚುತ್ತಿರುವ ಪೊಲೀಸರು ಎಸ್ ಆರ್ ನಗರ ಪೊಲೀಸರಿಂದ ಮುಂದುವರೆದ ತನಿಖೆ ನಡೆಯುತ್ತಿದೆ.