ಕೆಲವು ಘಟನೆಗಳು ವಿಚಿತ್ರವಾಗಿದ್ದರೂ ನಿಜವಾಗಿರುತ್ತವೆ.ಅದಕ್ಕೆ ಸಾಕ್ಷಿಯಾಗಿ ಯಾವುದೇ ಕಾರಣವಿಲ್ಲದೇ ಯುವಕನೊಬ್ಬ 56 ಬ್ಲೇಡ್ಗಳನ್ನು ನುಂಗಿರುವ ಘಟನೆ ರಾಜಸ್ಥಾನದ ಬಾರ್ಮರ್ ಎಂಬಲ್ಲಿ ನಡೆದಿದೆ. ರಾಜಸ್ಥಾನದ ಯಶಪಾಲ್ ಸಿಂಗ್ ಎಂಬಲ್ಲಿ 25 ವರ್ಷದ ಯುವಕ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದಾತ ಸ್ನೇತರೊಡನೆ ವಾಸವಿದ್ದ ಆದರೆ ಕೆಲವು ದಿನಗಳಿಂದ ಆತ ಒಬ್ಬನೇ ಆ ರೂಮಿನಲ್ಲಿದ್ದು ಮಾನಸಿಕ ರೋಗಕ್ಕೆ ತುತ್ತಾಗಿ ಪ್ರತಿನಿತ್ಯ ಪೇಪರ್ ಮತ್ತು ಪ್ಲಾಸ್ಟಿಕ್ ಜೊತೆಯಲ್ಲಿ ಬ್ಲೇಡ್ಗಳನ್ನು ತಿನ್ನುತ್ತಿದ್ದನು.
ಈ ಹಿಂದೆ ಯಾವುದೇ ಅನಾರೋಗಕ್ಕೆ ತುತ್ತಾಗದೇ ಆರೋಗ್ಯವಾಗಿದ್ದನು. ಆದರೆ ಹೊಟ್ಟೆಯೊಳಗೆ ಕಾಗದವು ಕರಗಿದಂತೆ ಹೊಟ್ಟೆಯೊಳಗೆ ಬ್ಲೇಡ್ ಕೆಲಸಮಾಡಲು ಶುರು ಮಾಡಿದೆ. ಪರಿಣಾಮವಾಗಿ ಢೀರನೆ ರಕ್ತ ವಾಂತಿ ಮಾಡಲಾರಂಭಿಸಿದ್ದಾನೆ. ಈ ಹಿನ್ನೆಲೆ ಅವನೇ ತನ್ನ ಸ್ನೇತರಿಗೂ ಕರೆ ಮಾಡಿ ಆರೋಗ್ಯ ಹದಗೆಟ್ಟಿರುವ ಬಗ್ಗೆಹೇಳಿದ್ದಾನೆ. ವೈದ್ಯರ ಬಳಿ ತೋರಿಸಿದಾಗ ಆತನನ್ನು ಎಕ್ಸ್-ರೇ ಒಳಪಡಿಸಿದರು. ಆ ವೇಳೆ ವೈದ್ಯರ ಅಚ್ಚರಿಗೆ ಕಾರಣವಾಯಿತು ಹೊಟ್ಟೆಯಲ್ಲಿರುವ ಲೋಹದ ಅಂಶ.
ಶಸ್ತ್ರಚಿಕಿತ್ಸೆ ಮಾಡಿ ನೋಡಿದರೇ ಒಂದಲ್ಲ ಎರಡಲ್ಲ ಆತನ ಹೊಟ್ಟೆಯಲ್ಲಿ 56 ಬ್ಲೇಡ್ಗಳು ಕಂಡುಬಂದಿದೆ. ಈತ ಪೇಪರ್ ಕವರ್ಗಳ ಸಮೇತ ಬ್ಲೆಡ್ ನುಂಗಿದ್ದು, ಪ್ರಾರಂಭದಲ್ಲಿ ಆತನಿಗೆ ಗೊತ್ತಾಗಲ್ಲಿಲ್ಲ. ಹೊಟ್ಟೆಯೊಳಗೆ ಪೇಪರ್ ಕರಗಿದಂತೆ, ಅದು ಹಾನಿಯನ್ನುಂಟುಮಾಡಲು ಪ್ರಾರಂಭಿಸಿದೆ. ನಂತರ ನೋವು, ವಾಕರಿಕೆ ಪ್ರಾರಂಭವಾಗಿದೆ. ಆತ ಬ್ಲೇಡ್ಗಳನ್ನು ತಿನ್ನುವ ಮೊದಲು ಎರಡು ಭಾಗಗಳಾಗಿ ಮುರಿದು ತಿಂದಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.ಶಸ್ತ್ರಚಿಕಿತ್ಸೆ ಬಳಿಕ ಆ ವ್ಯಕ್ತಿ ಆರೋಗ್ಯವಾಗಿದ್ದನೆಂದು ವೈದ್ಯರು ತಿಳಿಸಿದ್ದಾರೆ.