ಬೆಂಗಳೂರು :- ಶಿಕ್ಷಕಿಯೊಬ್ಬರು ಯುವಕನಿಂದ ಲೈಂಗಿಕ ಕಿರುಕುಳ ಎದುರಿಸಿದ ಘಟನೆ ನಡೆದಿದ್ದು, ಇದು ತಡವಾಗಿ ಬೆಳಕಿದೆ ಬಂದಿದೆ.
ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಶಿಕ್ಷಕಿಯೊಬ್ಬರಿಗೆ ಯುವಕ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವ್ಯಕ್ತಿಯನ್ನು ಮನೋಜ್ (26) ಎಂದು ಗುರುತಿಸಲಾಗಿದೆ. ಶಿಕ್ಷಕಿ ನೀಡಿದ ದೂರಿನ ಮೇರೆಗೆ ಉಪ್ಪಾರಪೇಟೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ. ಇದೇ ತಿಂಗಳ ಡಿಸೆಂಬರ್ 25ರಂದು ಶಿಕ್ಷಕಿಯೊಬ್ಬರು ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಯುವಕನಿಂದ ಲೈಂಗಿಕ ಕಿರುಕುಳ ಎದುರಿಸಿದ್ದಾರೆ. ಇವರು ಮೂಲತಃ ಶಂಕರಪುರ ಬಡಾವಣೆ ನಿವಾಸಿಯಾಗಿದ್ದು, ಘಟನೆ ದಿನ ಇವರು ವೈಟ್ಫಿಲ್ಡ್ಗೆ ಹೊರಟಿದ್ದರು. ಈ ಸಂಬಂಧ ಅವರು ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣದಲ್ಲಿ ರೈಲು ಹತ್ತಿದ್ದರು. ಅದೇ ರೈಲಿನಲ್ಲಿ ಆರೋಪಿ ಮನೋಜ್ ಸಹ ಸಂಚರಿಸುತ್ತಿದ್ದ
ಕೈ,ಮೈ ಮುಟ್ಟಿ ಅಸಭ್ಯ ವರ್ತನೆ ಮೆಜೆಸ್ಟಿಕ್ ಜಂಕ್ಷನ್ನಲ್ಲಿ ಹಸಿರು ಮಾರ್ಗದಿಂದ ನೇರಳೆ ಮಾರ್ಗಕ್ಕೆ ರೈಲು ಬದಲಿಸಲು ಇಳಿದಾಗ ಈ ಮನೋಜ್ ಆ ಶಿಕ್ಷಕಿಯ ಮೈ, ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ. ಇದರ ವಿರುದ್ಧ ಶಿಕ್ಷಕಿ ಕೂಡಲೇ ಮೆಟ್ರೋ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಆಗ ಸಿಬ್ಬಂದಿ ಅರೋಪಿಯನ್ನು ಹಿಸಿದು ಉಪ್ಪಾರಪೇಟೆ ಪೊಲೀಸರಿಗೆ ಒಪ್ಪಿಸಿದ್ದರು. ಆರೋಪಿಯು ಮದ್ಯದ ಅಮಲಿನಲ್ಲಿದ್ದು, ಈ ಕೃತ್ಯ ನಡೆಸಿದ್ದಾನೆ ಎಂಬುದು ಪತ್ತೆ ಆಗಿದೆ. ಹೀಗಾಗಿ ಆತನಿಗೆ ಎಚ್ಚರಿಕೆ ಕೊಟ್ಟು, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ