ಬೆಂಗಳೂರು: ಹದಿ ಹರೆಯದ ಜೋಷ್ ಇದ್ಯಲ್ಲ ಅದರ ಎಫೆಕ್ಟ್ ಇದು . ಈಗೋಗೆ ಬಿದ್ದ ಯುವಕರು ನಡೆಸಿದ ಕೃತ್ಯಕ್ಕೆ ಈಗ ಜೈಲು ಸೇರಬೇಕಿದೆ. ಸರ್ಕಾರಿ ಬಸ್ ನಲ್ಲಿ ನಡೆದ ಕಿರಿಕ್ ಕೈಮೀರಿ,ಖಾಕಿ ಮೇಲೆಯೇ ಕೈಎತ್ತುವವರೆಗೂ ಹೋಗಿದೆ. ಯಸ್ ಬಸ್ ನಲ್ಲಿ ನಡೆದ ಪ್ರಹಸನ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ . ಅಷ್ಟಕ್ಕೂ ನಡೆದಿದ್ದೇನು ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
ಯಲಹಂಕ ರೂಟ್ ಸರ್ಕಾರಿ ಬಸ್ ನಲ್ಲಿ ನಡೆದ ಘಟನೆ ಇದು. ಮೌನೇಶ್ ಎಂಬ ಮೆಡಿಕಲ್ ಸ್ಟೂಡೆಂಟ್ , ಕಂಡಕ್ಟರ್ ಜೊತೆ ಪಾಸ್ ಕಾರಣಕ್ಕಾಗಿ ವಾಗ್ವಾದ ನಡೆಸಿದ್ದಾನೆ . ಈ ವೇಳೆ ಕೈಕೈ ಮಿಲಾಯಿಸೋ ಹಂತಕ್ಕೆ ಹೋದಾಗ ಪೊಲೀಸರಿಗೆ ಕರೆ ಮಾಡಿದ್ದ ಹಿನ್ನಲೆ ಮೌನೇಶ್ ನನ್ನ ಪೊಲೀಸರು ಎಳೆದೊಯ್ದಿದ್ದರು. ಈ ಘಟನೆ ನಡೆದಿದ್ದು ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ
ವೈದ್ಯಕೀಯ ವಿದ್ಯಾರ್ಥಿಯಾಗಿರುವ ಮೌನೇಶ್ ಕಾಲೇಜಿಗೆಂದು ಹೊರಟಿದ್ದ. ಈ ವೇಳೆ ಬಸ್ ನಲ್ಲಿ ಪಾಸ್ ನ ಜೆರಾಕ್ಸ್ ತೋರಿಸಿದ್ದಾನೆ. ಜೆರಾಕ್ಸ್ ಬೇಡ ಒರಿಜಿನಲ್ ಬಸ್ ಪಾಸ್ ತೋರಿಸಲು ಕಂಡಕ್ಟರ್ ಹೇಳಿದರೆ .ಮಾತಿನ ನಡುವೆ ಶಕ್ತಿ ಯೋಜನೆಯ ವಿಚಾರ ಬಂದಿದೆ. ಮಹಿಳೆಯರಿಗೆ ಆಧಾರ್ ಕಾರ್ಡ್ ಜೆರಾಕ್ಸ್ ತೋರಿಸಿದ್ರೂ ಬಿಡ್ತಿರಾ ನಾವ್ ಜೆರಾಕ್ಸ್ ಕೊಟ್ಟರೆ ಯಾಕೆ ತಗೊಳೋದಿಲ್ಲ ಎಂದು ವಾದ ಮಾಡಿದ್ದ . ಈ ವೇಳೆ ಕಂಡಕ್ಟರ್ ಹಾಗು ಮೌನೇಶ್ ಇಬ್ಬರ ನಡುವಿನ ಜಗಳ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಇದೇ ವೇಳೆ ಮೌನೇಶ್ ಬಸ್ ನ ಸ್ಟೇರಿಂಗ್ ಗೆ ಕೈ ಹಾಕಿ ಎಳೆದಾಡಿದನಂತೆ ಈ ವೇಳೆ ಪೊಲೀಸರಿಗೆ ಕರೆ ಮಾಡಿದ ಹಿನ್ನಲೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೌನೇಶ್ ನನ್ನ ವಶಕ್ಕೆ ಪಡೆದಿದ್ದಾರೆ.
ಅಷ್ಟಕ್ಕೇ ಸುಮ್ಮನಾಗಿದ್ರೆ ಸಂಜೆಯೊಳಗೆ ವಾರ್ನ್ ಮಾಡಿ ಕಳುಹಿಸುತ್ತಿದ್ದಾರೇನೋ ಆದ್ರೆ ಪೊಲೀಸ್ ಠಾಣೆಗೆ ಬಂದ ಬಳಿಕ ನಡೆದ ಪ್ರಹಸನವೇ ಈಗ ಮೌನೇಶ್ ಜೈಲು ಪಾಲಾಗುವಂತೆ ಮಾಡಿದೆ. ಮೌನೇಶ್ ಪೊಲೀಸ್ ಠಾಣೆಯಲ್ಲಿರುವಾಗಲೇ ಆತನ ಸಹೋದರ ಶರತ್ ಪೊಲೀಸ್ ಠಾಣೆಗೆ ಬಂದು ರೈಟರ್ ಜೊತೆ ನನ್ನ ತಮ್ಮನನ್ನ ಹೇಗೆ ಠಾಣೆಯಲ್ಲಿ ಇಟ್ಟುಕೊಂಡಿದ್ದಿರಾ ಎಂದು ಗಲಾಟೆ ಮಾಡುತ್ತಿದ್ದ . ಇದನ್ನ ಕಂಡು ಹೊರ ಬಂದ ಪಿಎಸೈ ಸಿದ್ದೂ ಹೂಗಾರ್ ಶರತ್ ಗೆ ಸ್ಟೇಷನ್ ನಲ್ಲಿ ಹೀಗೇಲ್ಲಾ ಮಾಡ್ತರೇನ್ರಿ ಎಂದು ಅವಾಜ್ ಹಾಕಿದ್ದ. ಇದರಿಂದ ಕೆರಳಿದ ಮೌನೇಶ್ ಸಬ್ ಇನ್ಸ್ಪೆಕ್ಟರ್ ಸಿದ್ದು ಮುಖಕ್ಕೆ ಪಂಚ್ ಮಾಡಿ ಮರ್ಮಾಂಗಕ್ಕೆ ಹಲ್ಲೆ ಮಾಡಿದ್ದಾನಂತೆ . ಇನ್ನು ಮೌನೇಶ್ ತಂದೆಯ ಹೇಳಿಕೆಯೇ ಬೇರೆ . ಪೊಲೀಸರು ಮೌನೇಶ್ ಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ರು ಅದನ್ನ ಪ್ರಶ್ನಿಸಿದಾಗ ಎಲ್ಲಾ ಪೊಲೀಸರು ಸೇರಿ ತನ್ನ ಮಗನನ್ನ ನೆಲಕ್ಕೆ ಕೆಡವಿ ಮನಸೋ ಇಚ್ಚೆ ಹಲ್ಲೆ ನಡೆಸಿದ್ದಾರಂತೆ
ಇನ್ನು ಪೊಲೀಸ್ ಠಾಣೆಯ ಒಳಗೆ ನಡೆದಂತಹ ಘಟನೆಯಾದ ಕಾರಣ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಯುವ ಸಾಧ್ಯತೆ ಇದೆ . ಈ ಸಂಬಂಧ ಬಸ್ ಕಂಡಕ್ಟರ್ ಕೂಡ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ .