ಧಾರವಾಡ: ಯುವಕನೋರ್ವ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಧಾರವಾಡದ ನಾಗಲಾವಿ ಕರೆಯಲ್ಲಿ ನಡೆದಿದ್ದು, ಆತನಿಗಾಗಿ ಸುಮಾರು ಐದು ಗಂಟೆ ಹುಡುಕಾಟ ನಡೆಸಿ ಕೊನೆಗೆ ಯುವಕನ ಮೃತ ದೇಹವನ್ನು ಹೊರತೆಗೆಯುವಲ್ಲಿ ಅಗ್ನಿ ಶಾಸಮಕದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಧಾರವಾಡದ ಕಂಠಿಗಲ್ಲಿಯ ನಿವಾಸಿ ಮಲ್ಲಿಕ್ ಎಂಬ ಮೂವತ್ತು ವರ್ಷದ ಯುವಕ ಮೃತನೆಂದು ಗುರುತಿಸಲಾಗಿದೆ. ಇನ್ನೂ ಶವವಾಗಿ ಪತ್ತೆಯಾಗಿರುವ ಮಲಿಕನಿಗೆ ಜೂನ್ ತಿಂಗಳಲ್ಲಿ ಮದುವೆ ನಿಶ್ಚಿಯವಾಗಿತ್ತೆಂದು ಹೇಳಲಾಗುತ್ತಿದೆ. ಕಳೆದೆರಡು ದಿನಗಳಿಂದ ಮಲಿಕ ಮನೆಯಿಂದ ನಾಪತ್ತೆಯಾಗಿದ್ದು, ನಾಗಲಾವಿ ಗ್ರಾಮದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಇನ್ನೂ ನಾಗಲಾವಿ ಗ್ರಾಮದ ಕೆರೆಯಲ್ಲಿ ಯುವಕನೋರ್ವ ಶವ ಪತ್ತೆಯ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರ ಮಲಿಕ್ನ ಮೃತ ದೇಹ ನೋಡಿ ಅಕ್ರಂದನ ಮುಗಿಲು ಮುಟ್ಟಿತ್ತು.
ಯುವಕನಿಗಾಗಿ ಮಂಗಳವಾರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೋಟ್ ಮೂಲಕ ಕಾರ್ಯಾಚರಣೆ ನಡೆಸಿದ್ದರು. ಸುಮಾರು ಹೊತ್ತಿನ ನಾಲ್ಕು ಗಂಟೆ ಅಧಿಕ ಸಮಯ ಕಾರ್ಯಾಚರಣೆ ನಡೆಸಿದ ಅಗ್ನು ಶಾಮಕ ದಳದ ಸಿಬ್ಬಂದಿ ಕೊನೆಗೂ ತಡ ಸಂಜೆ ವೇಳೆ ಮೃತದೇಹ ಹೊರತೆಗೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.
ಶವವಾಗಿ ಪತ್ತೆಯಾದ ಮಲ್ಲಿಕ್ ಒಬ್ಬನೇ ಕೆರೆಗೆ ಹೋಗಿ ಬಿದಿದ್ದಾನೋ, ಅಥವಾ ಇವನ್ನು ಯಾರಾದರೂ ಬೀಳಿಸಿದ್ದಾರೋ ಎಂಬುವುದರ ಬಗ್ಗೆ ಗ್ರಾಮೀಣ ಠಾಣೆಯ ಪೊಲೀಸರ ತನಿಖೆಯ ನಂತರವಷ್ಟೇ ಹೊರಬರಬೇಕಾಗಿದೆ.