ಭಾರತದಲ್ಲಿ ತಮಗಿಂತ ಹಿರಿಯ ವ್ಯಕ್ತಿಯನ್ನು ಅಣ್ಣಾ ಅಥವಾ ಅಕ್ಕಾ ಎಂದು ಕರೆಯುವುದು ಸಾಮಾನ್ಯವಾಗಿದೆ. ಆದರೆ ಹೀಗೆ ವರ್ಷಾನುಗಟ್ಟಲೆ ಒಬ್ಬರನ್ನು ಅಣ್ಣಾ ಎಂದು ಕರೆದು ಮತ್ತೆ ಅವರನ್ನೇ ಮದುವೆ (Marriage)ಯಾದರೆ ಹೇಗಿರಬೇಡ. ಇಲ್ಲಾಗಿದ್ದು ಅದೇ. ಯುವತಿಯ ಹೆಸರು ವಿನಿ. ಇವರು 8 ವರ್ಷಗಳವರೆಗೆ ಭಯ್ಯಾ (Brother) ಎಂದು ಕರೆಯುತ್ತಿದ್ದ ವ್ಯಕ್ತಿಯನ್ನೇ ಮದುವೆಯಾಗಿದ್ದಾರೆ. ತನ್ನ ಕತೆಯನ್ನು ತಾನೇ ಇನ್ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ. ಅವರಿಬ್ಬರು ಸಂಬಂಧಿಕರು ಎಂಬುದನ್ನೂ ಬಹಿರಂಗಪಡಿಸಿದ್ದಾರೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social media) 5 ಮಿಲಿಯನ್ಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದ್ದು, ಪರ-ವಿರೋಧ ಚರ್ಚೆಯನ್ನು ಹುಟ್ಟುಹಾಕಿದೆ.
ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್
ಈಗ ವೈರಲ್ ಆಗಿರುವ ವಿಡಿಯೋವನ್ನು ವಿನಿ ಮತ್ತು ಜೈ ಅವರ ಪೇಜ್ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಕ್ಲಿಪ್ನಲ್ಲಿ, ದಂಪತಿಗಳು (Couples) ಚಿಕ್ಕವರಿದ್ದಾಗ ಒಟ್ಟಿಗೆ ಪೋಸ್ ನೀಡುವುದನ್ನು ಕಾಣಬಹುದು. ವಿನಿ ಅವರು ಜೈ ಅವರನ್ನು ಮದುವೆಯಾಗಿದ್ದಾರೆ ಮತ್ತು ಅವರಿಬ್ಬರಿಗೂ ಈಗ ಮಗು ಕೂಡ ಇದೆ ಎಂದು ತಿಳಿಸಿದ್ದಾರೆ. ಮಗುವಿನ ಕೆಲವು ಚಿತ್ರಗಳು (Photos) ಸಹ ರೀಲ್ನಲ್ಲಿ ಗೋಚರಿಸುತ್ತವೆ. ‘ನಾವು ಸಂಬಂಧಿಕರಾಗಿದ್ದೇವೆ ಮತ್ತು ನಮ್ಮ ವಯಸ್ಸಿನ ಅಂತರದಿಂದಾಗಿ ನಾನು ಅವರನ್ನು ಹಲವು ವರ್ಷಗಳಿಂದ ಭಯ್ಯಾ ಎಂದು ಕರೆಯುತ್ತಿದ್ದೆ. ಈಗ ಗಂಡ ಎಂದು ಕರೆಯುತ್ತಿದ್ದೇನೆ’ ಎಂದು ಈ ವೀಡಿಯೋಗೆ ಶೀರ್ಷಿಗೆ ನೀಡಲಾಗಿದೆ.
ಆನ್ಲೈನ್ನಲ್ಲಿ ಹಂಚಿಕೊಂಡ ನಂತರ ವೀಡಿಯೊ ಸುಮಾರು 5 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ. ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವೀಡಿಯೋಗೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವೊಬ್ಬರು ಸುಂದರವಾದ ಜೋಡಿ ಎಂದರೆ, ಇನ್ನು ಕೆಲವರು ಹೀಗೆ ಮದುವೆಯಾಗಲು ಸಹ ಸಾಧ್ಯವೇ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿ ‘ಭಯ್ಯಾ ಎಂದು ಕರೆಯುವುದು ಸಂಬಂಧವಲ್ಲ.ನಿಮಗಿಂತ ಹಿರಿಯರನ್ನು ಭಯ್ಯಾ ಎಂದು ಕರೆಯಬಹುದು. ಹೀಗಾಗಿ ಇವರನ್ನು ಮದುವೆಯಾಗುವುದು ತಪ್ಪಲ್ಲ’ ಎಂದಿದ್ದಾರೆ.