ಬೆಂಗಳೂರು: ಹಾಡು ಹಗಲೇ ಯುವತಿಗೆ ಡ್ರ್ಯಾಗರ್ ಹಿಡಿದು ನಡು ರಸ್ತೆಯಲ್ಲಿ ಯುವಕ ಕಿರುಕುಳ ನೀಡಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ (Bangalore)ನಡೆದಿದೆ. ಬೆಂಗಳೂರಿನ ಪುಲಿಕೇಶಿ ನಗರದ ವಿವೇಕಾನಂದ ನಗರ ರೆಸಿಡೆನ್ಸಿ ಬಳಿ ಈ ಘಟನೆ ನಡೆದಿದೆ. ಸಿಸಿಟಿವಿಯಲ್ಲಿ ಈ ಕಿರುಕುಳದ ದೃಶ್ಯ ದಾಖಲಾಗಿದೆ. ಡ್ಯಾಗರ್ ಹಿಡಿದು ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಕಿರುಕುಳ ನೀಡಿ ಮೊಬೈಲ್ ಕಸಿಯಲು ಪಾತಕಿ ಪ್ರಯತ್ನಿಸಿದ್ದಾನೆ.
ಆತ ಕಿರುಕುಳ ನೀಡುತ್ತಿದ್ದಂತೆ ಮತ್ತೊಬ್ಬ ಮಹಿಳೆ ಆಕೆಯ ರಕ್ಷಣೆಗೆ ಧಾವಿಸಿ ಬಂದಿದ್ದಾಳೆ. ಇದನ್ನು ನೋಡಿ ಪುಂಡ ಪರಾರಿಯಾಗಿದ್ದಾನೆ. ಮಹಿಳೆಯರಿಗೆ ರಾಜಧಾನಿಯಲ್ಲಿ ರಕ್ಷಣೆ ಇಲ್ಲದಂತಾಗಿದೆಯಾ ಎಂಬ ಪ್ರಶ್ನೆ ಎದ್ದಿದೆ. ಸರಿಯಾಗಿ ಹೊಯ್ಸಳ ಪೆಟ್ರೋಲಿಂಗ್ ಆಗ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೌಡಿಗಳ ಹಾವಳಿಯಿಂದ ಹಗಲಿನಲ್ಲಿಯೇ ಮಹಿಳೆಯರು ಓಡಾಡಲು ಅಸಾಧ್ಯವಾಗುತ್ತಿದೆ ಎಂದು ದೂರಿದ್ದಾರೆ.