ದೇವನಹಳ್ಳಿ : ಶೌಚಾಲಯ ಕಟ್ಟಡ ಕೆಲಸ ಮಾಡುವಾಗ ವಿದ್ಯುತ್ ಸ್ವರ್ಶಿಸಿ ಯುವಕ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಯರ್ತಿಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ವಿಜಯಪುರ ಮೂಲದ ಶ್ರೇಯಸ್ ( 18 ) ಮೃತ ದುರ್ದೈವಿಯಾಗಿದ್ದು,
ನೆನ್ನೆ ರಾತ್ರಿ ಶೌಚಾಲಯ ಕಟ್ಟಡ ಕೆಲಸ ಮಾಡಲು ಯುವಕ ಹೋಗಿದ್ದನು. ಈ ವೇಳೆ ಮನೆ ಮುಂದಿದ್ದ ವಿದ್ಯುತ್ ಲೈನ್ ಸ್ಪರ್ಶಿಸಿ ಅವಘಡ ಸಂಭವಿಸಿದೆ. ಇನ್ನೂ ಈ ಘಟನೆ ಸಂಬಂಧ ಕೆಂಪೇಗೌಡ ಏರ್ಪೋಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.