ದೇವನಹಳ್ಳಿ: ರಾಜ್ಯ ವಿಧಾನಸಭೆ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಜನಸಮೂಹದ ಜೊತೆಯಲ್ಲಿ ಹಲವಾರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.. ಆದ್ರೆ ಇಲ್ಲೊಬ್ಬ ಅಭ್ಯರ್ಥಿ ಮಾತ್ರ ವಿನೂತನವಾಗಿ ಆಗಮಿಸಿ ನಾಮಪತ್ರ ಸಲ್ಲಿಸಿದ್ದಾರೆ.. ಸಾಮಾನ್ಯವಾಗಿ ಅಭ್ಯರ್ಥಿಗಳು ತೆರೆದ ವಾಹನ, ಬೈಕ್ ಚಲಾಯಿಸಿ, ಸಾವಿರಾರು ಜನರೊಂದಿಗೆ, ಪಕ್ಷದ ಮುಖಂಡರ ಜೊತೆ ಬಂದು ನಾಮಪತ್ರ ಸಲ್ಲಿಸಿರುವುದನ್ನು ನೋಡಿದ್ದೇವೆ.
Video Player
00:00
02:17
ಆದರೆ, ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ಬಿ.ಕೆ. ಶಿವಪ್ಪ ಕುದುರೆ ಏರಿ ಬಂದು ತಮ್ಮ ನಾಮಪತ್ರವನ್ನು ಸಲ್ಲಿಸಿದ್ದು, ಎಲ್ಲರ ಗಮನ ಸೆಳೆದಿದೆ. ಇದೇ ವೇಳೆ ಎಎಪಿ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಅಭ್ಯರ್ಥಿ ಬಿ.ಕೆ ಶಿವಪ್ಪಗೆ ಸಾಥ್ ನೀಡಿದ್ರು.. ಈ ವೇಳೆ ಅಭ್ಯರ್ಥಿ ಶಿವಪ್ಪ ಎತ್ತಿನ ಬಂಡಿ, ಕಾಲಿ ಸಿಲಿಂಡರ್ ಜೊತೆ ನಗರದ ಪ್ರಮುಖ ಬೀದಿಗಳಲ್ಲಿ ರ್ಯಾಲಿ ನಡೆಸಿ, ಪರೋಕ್ಷವಾಗಿ ಬೆಲೆ ಏರಿಕೆ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು..