ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಮಗಳು ಆರಾಧ್ಯ ಬಚ್ಚನ್ ಹೆಸರಿನಲ್ಲಿ ಈಗಾಗಲೇ ನಕಲಿ ಅಕೌಟ್ ಓಪನ್ ಆಗಿದೆ. ಈ ಬಗ್ಗೆ ದೂರು ಕೂಡ ದಾಖಲಾಗಿದೆ. ಇದೀಗ ಆರಾಧ್ಯ ಎಂದು ಹೇಳಲಾಗುತ್ತಿರುವ ಚಿತ್ರವೊಂದು ಸಾಮಾಜಿಕ ಮಾಧ್ಯಮದ ವಿವಿಧ ವೇದಿಕೆಗಳಲ್ಲಿ ಹರಿದಾಡುತ್ತಿದೆ. ಈ ಫೋಟೋದಲ್ಲಿ ಆರಾಧ್ಯ ಅವರು ಹಸಿರು ಬಣ್ಣದ ಕ್ರಾಪ್ ಟಾಪ್ ಮತ್ತು ಸ್ಕರ್ಟ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಎನ್ಎಸ್ಎಸ್ ನೀರಜ್ ಎಂಬವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಈ ಫೋಟೋವನ್ನು ಅಪ್ಲೋಡ್ ಮಾಡಿಕೊಂಡಿದ್ದಾರೆ. “ಈಗ ಆರಾಧ್ಯ ಕೂಡ ಐಶ್ವರ್ಯಾ ರೈ ಅವರೊಂದಿಗೆ ಸೌಂದರ್ಯದಲ್ಲಿ ಸ್ಪರ್ಧಿಸಲು ಪ್ರಾರಂಭಿಸಿದ್ದಾರೆ. ಐಶ್ವರ್ಯಾ ಪ್ರಶಸ್ತಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ, ತಾಯಿ ಮತ್ತು ಮಗಳು ಇಬ್ಬರೂ ಮ್ಯಾಚಿಂಗ್ ಕಪ್ಪು ಡ್ರೆಸ್ಗಳನ್ನು ಧರಿಸಿದ್ದರು. ಆದರೆ ಇಲ್ಲಿ ಜನರು ಐಶ್ವರ್ಯಾಳನ್ನು ಪಕ್ಕಕ್ಕಿಟ್ಟು ಆರಾಧ್ಯರನ್ನೇ ನೋಡಿದರು. ಇವರ ಮುದ್ದು ಮುಗುಳ್ನಗೆ ಮತ್ತು ಮುಖ ನೋಡಿದ ಜನರು ಭವಿಷ್ಯದಲ್ಲಿ ಬಾಲಿವುಡ್ನ ದೊಡ್ಡ ನಾಯಕಿಯಾಗುತ್ತಾರೆ ಎಂದು ಈಗಾಗಲೇ ಊಹಿಸಲು ಪ್ರಾರಂಭಿಸಿದ್ದಾರೆ.’’ ಎಂದು ಬರೆದುಕೊಂಡಿದ್ದಾರೆ.
ಅಂದ ಹಾಗೆ ಇದು ಅರಾಧ್ಯರ ರಿಯಲ್ ಫೋಟೋವಲ್ಲ. ಬದಲಾಗಿ ಇದನ್ನು ಎಡಿಟ್ ಮಾಡಲಾಗಿದೆ. ನಟಿ ಮತ್ತು ರೂಪದರ್ಶಿ ಮೇಘಾ ಶುಕ್ಲಾ ಅವರ ಫೋಟೋವನ್ನು ಎಡಿಟ್ ಮಾಡಲಾಗಿದ್ದು ಆರಾಧ್ಯ ಬಚ್ಚನ್ ಅವರ ಮುಖವನ್ನು ಅವರ ಮುಖದ ಮೇಲೆ ಹಾಕಲಾಗಿದೆ.