ಸದಾ ಸಿನಿಮಾಗಳ ಮೂಲಕವೇ ಸಖತ್ ಸುದ್ದಿಯಾಗುತ್ತಿದ್ದ ಕಾಲಿವುಡ್ ಖ್ಯಾತ ನಟ ಜಯಂ ರವಿ ಇದೀಗ ವೈಯಕ್ತಿಕ ವಿಚಾರವಾಗಿ ಸುದ್ದಿಯಾಗಿದ್ದಾರೆ. ಜಯಂ ರವಿ ದಾಂಪತ್ಯದಲ್ಲಿ ಬಿರುಕು ಮೂಡಿದೆಯಾ ಎಂಬ ಅನುಮಾನ ಶುರುವಾಗಿದೆ. ಅಂದ ಹಾಗೆ ಈ ಅನುಮಾನಕ್ಕೆ ಕಾರಣವಾಗಿರೋದು ಜಯಂ ರವಿ ಪತ್ನಿ ಆರತಿ ನಡೆ.
ಆರತಿ ರವಿ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ನಿಂದ ಪತಿ ಜಯಂ ರವಿ ಜೊತೆಗಿನ ಫೋಟೋಗಳನ್ನೆಲ್ಲಾ ಡಿಲೀಟ್ ಮಾಡಿದ್ದಾರೆ. ತಮ್ಮ ಮದುವೆಯ ಫೋಟೋಗಳನ್ನೂ ಆರತಿ ರವಿ ಡಿಲೀಟ್ ಮಾಡಿದ್ದಾರೆ. ಇದನ್ನ ಗಮನಿಸಿರುವ ಅಭಿಮಾನಿಗಳಿಗೆ ಬಿಗ್ ಶಾಕ್ ಆಗಿದೆ ಜಯಂ ರವಿ ಸಂಸಾರದಲ್ಲೂ ಬಿರುಗಾಳಿ ಬೀಸಿದೆಯಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಅಂದಹಾಗೆ, ತಮಿಳು ಕಿರುತೆರೆಯ ಪ್ರಖ್ಯಾತ ನಿರ್ಮಾಪಕರಾದ ಸುಜಾತಾ ವಿಜಯ್ ಕುಮಾರ್ ಅವರ ಪುತ್ರಿ ಆರತಿ. ಪರಸ್ಪರ ಪ್ರೀತಿಸಿ ಜಯಂ ರವಿ ಹಾಗೂ ಆರತಿ 2009ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
ಅಂದ ಹಾಗೆ ಆರತಿ ತಮ್ಮ ಹೆಸರಿನ ಜೊತೆಗೆ ‘ರವಿ’ ಅಂತ ಬರೆದುಕೊಂಡಿದ್ದು ಅದನ್ನು ಇನ್ನೂ ಆರತಿ ಉಳಿಸಿಕೊಂಡಿದ್ದಾರೆ. ಹಾಗೇ, ಆರತಿ ಅವರ ಬಯೋದಲ್ಲಿ ‘ಮ್ಯಾರೀಡ್ ಟು ಜಯಂ ರವಿ’ ಅಂತ ಇನ್ನೂ ಇದೆ.
ತಮ್ಮ ವೈವಾಹಿಕ ಜೀವನವನ್ನ ಖಾಸಗಿಯಾಗಿ ಇರಿಸಲು ಆರತಿ ರವಿ ಇಚ್ಛಿಸಿದ್ದಾರಂತೆ. ಇನ್ಸ್ಟಾಗ್ರಾಮ್ನಲ್ಲಿ ತಮ್ಮ ವೈಯಕ್ತಿಕ ಚಿತ್ರಗಳನ್ನು ಮಾತ್ರ ಪ್ರದರ್ಶಿಸಲು ಆರತಿ ರವಿ ಬಯಸಿದ್ದಾರಂತೆ. ಹಾಗಂತ ಆರತಿ ರವಿ ಅವರು ಇನ್ಸ್ಟಾಗ್ರಾಮ್ ಪ್ರಶ್ನೋತ್ತರ ಸೆಷನ್ನಲ್ಲಿ ಹೇಳಿದ್ದಾರಂತೆ.