ಕೆಲವು ಕೆಲವು ದಿನಗಳಿಂದ ಅಭಿಶೇಕ್ ಅಂಬರೀಶ್ ತಂದೆಯಾಗುತ್ತಿದ್ದಾರೆ, ರೆಬೆಲ್ ಸ್ಟಾರ್ ಕುಟುಂಬಕ್ಕೆ ಮುದ್ದು ಕಂದನ ಆಗಮನವಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದ. ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ದಂಪತಿ ಮೊದಲ ಮಗುವಿನ ನೀರಿಕ್ಷೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ಈ ಮಧ್ಯೆ ಅವಿವಾ ಬಿದ್ದಪ್ಪ ಹೊಸ ಫೋಟೋ ಹಂಚಿಕೊಂಡಿದ್ದು ಫೋಟೋದಲ್ಲಿ ಅವಿವಾ ಸಖತ್ ಗ್ಲೋ ಆಗಿ ಕಾಣಿಸುತ್ತಿದ್ದಾರೆ.
ಇತ್ತೀಚೆಗೆ ಅವಿವಾ-ಅಭಿಷೇಕ್ ವಿದೇಶದಲ್ಲಿ ಟ್ರಿಪ್ ಹೋಗಿದ್ದ ವೀಡಿಯೋವನ್ನ ಶೇರ್ ಮಾಡಿದ್ದರು. ಆ ವೀಡಿಯೋದಲ್ಲೂ ಅವಿವಾ ಸೆಲ್ಫಿ ಹೊರತಾಗಿ ಹೊಟ್ಟೆ ಭಾಗವನ್ನ ಕಾಣಿಸಿರಲಿಲ್ಲ. ಹೀಗಾಗಿ ಅವಿವಾ ಗರ್ಭಿಣಿ ಅನ್ನೋ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ.
ಆದರೆ ಇದೀಗ ಅಭಿಷೇಕ್ ಪತ್ನಿ ಅವಿವಾ ಬಿದಪ್ಪ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹೊಸ ಫೋಟೋವೊಂದನ್ನ ಹಂಚಿಕೊಂಡಿದ್ದಾರೆ. ಆ ಫೋಟೋದಲ್ಲಿ ಅವಿವಾ ಅವರು ಗುಲಾಬಿ ಬಣ್ಣದ ರೇಷ್ಮೆ ಸೀರೆಯುಟ್ಟು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇದೇ ಫೋಟೋಗೆ ಸಾಕಷ್ಟು ಮಂದಿ ಕಾಮೆಂಟ್ಸ್ ಹಾಕಿದ್ದಾರೆ. ನೋಡಿ ಆ ಗ್ಲೋ ಹೇಗಿದೆ. ಕ್ಯೂಟ್ ಬ್ಯೂಟಿ ಅಂತೆಲ್ಲಾ ಕಾಮೆಂಟ್ಸ್ ಹಾಕಿದ್ದಾರೆ. ಸದ್ಯದಲ್ಲೇ ಸಮಲತಾ ಅಂಬರೀಶ್ ಕುಟುಂಬಕ್ಕೆ ಮತ್ತೊಂದು ಹೊಸ ಅತಿಥಿಯನ್ನು ಆಗಮನವಾಗಲಿದೆ ಎಂದು ಹೇಳಾಗುತ್ತಿದೆ.
ಆದರೆ ಈ ಬಗ್ಗೆ ಅವರ ಕುಟುಂಬ ಅಧಿಕೃತವಾಗದ ಮಾಹಿತಿಯನ್ನು ಇನ್ನೂ ಹಂಚಿಕೊಂಡಿಲ್ಲ. ಈ ಇಬ್ಬರ ಮದುವೆಯು ಕಳೆದ ವರ್ಷ ಜೂನ್ 5ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆದಿತ್ತು. ಅವಿವಾ ಬಿದ್ದಪ್ಪ, ಮಾಡೆಲ್ ಹಾಗೂ ಫ್ಯಾಷನ್ ಡಿಸೈನರ್ ಆಗಿದ್ದಾರೆ.