ಬಾಲಿವುಡ್ನ ಸ್ಟಾರ್ ಕಪಲ್ ಐಶ್ವರ್ಯ ರೈ, ಅಭಿಷೇಕ್ ಬಚ್ಚನ್ ಮಧ್ಯೆ ಎಲ್ಲವು ಸರಿ ಇಲ್ಲ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದೆ. ಎಲ್ಲಿಯೇ ಹೋದರು ಐಶ್ವರ್ಯ ತನ್ನ ಮಗಳೊಂದಿಗೆ ಹೋಗುತ್ತಿದ್ದು ಅಭಿಷೇಕ್ ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಇದೀಗ ಈ ಜೋಡಿ ಒಟ್ಟಿಗೆ ಹೋಳಿ ಆಚರಿಸುವ ಮೂಲಕ ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಿದ್ದಾರೆ.
ಅಭಿಷೇಕ್ ಬಚ್ಚನ್- ಐಶ್ವರ್ಯ ರೈ ಸಂಬಂಧ ಸರಿಯಲ್ಲ. ಇದೇ ಕಾರಣಕ್ಕೆ ಈ ಜೋಡಿ ಕೆಲವು ತಿಂಗಳಿನಿಂದ ಬೇರೆ ಬೇರೆ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಹೀಗಾಗಿ ಡಿವೋರ್ಸ್ ಆಗಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಆದರೆ ಇದೀಗ ಈ ಜೋಡಿ ಒಟ್ಟಿಗೆ ಹೋಳಿ ಆಚರಿಸಿ ಸಂಭ್ರಮಿಸಿದ್ದಾರೆ.
ಹೋಳಿ ಹಬ್ಬದ ದಿನ ಅಭಿಷೇಕ್ ದಂಪತಿ ಜೊತೆಯಾಗಿ ಆಚರಿಸಿದ್ದಾರೆ. ಹೋಳಿ ಹಬ್ಬವನ್ನು ಕುಟುಂಬದ ಜೊತೆ ಸಂಭ್ರಮದಿಂದ ಸೆಲೆಬ್ರೇಟ್ ಮಾಡಿದ್ದಾರೆ. ಈ ಮೂಲಕ ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಿ, ನಮ್ಮ ಸಂಸಾರ ಚೆನ್ನಾಗಿದೆ ಎಂದು ತೋರಿಸಿದ್ದಾರೆ.