ನಟಿ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಮಧ್ಯೆ ಎಲ್ಲವು ಸರಿಯಾಗಿಲ್ಲ ಎನ್ನುವ ಸುದ್ದಿ ಕೆಲ ದಿನಗಳಿಂದ ಕೇಳಿ ಬರ್ತಿದೆ. ಅದಕ್ಕೆ ಪೂರಕ ಎನ್ನುವಂತಹ ಅನೇಕ ಘಟನೆಗಳು ನಡೆಯುತ್ತಿವೆ. ಡಿವೋರ್ಸ್ ಪಡೆಯಲು ಈ ದಂಪತಿ ನಿರ್ಧರಿಸಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದ್ದು ಅಭಿಷೇಕ್ ಮಾತ್ರ ನಾನಿನ್ನು ವಿವಾಹಿತ ಎಂದಿದ್ದಾರೆ. ಈ ಮಧ್ಯೆ ಅಭಿಷೇಕ್ ಪ್ಯಾರಿಸ್ ನಲ್ಲಿ ಸಿಂಗಲ್ ಆಗಿ ಸುತ್ತಾಡಿರುವುದು ಅನುಮಾನಕ್ಕೆ ಮತ್ತಷ್ಟು ರೆಕ್ಕೆ ಪುಕ್ಕ ಬಂದತಾಗಿದೆ.
ಫ್ಯಾಮಿಲಿ ಮ್ಯಾನ್ ಆಗಿದ್ದ ಅಭಿಷೇಕ್ ಬಚ್ಚನ್ ಎಲ್ಲೇ ಹೋದರು ಹೆಂಡತಿ ಹಾಗೂ ಮಗಳೊಂದಿಗೆ ಇರುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವರು ಪತ್ನಿಯಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಮೊದಲು ಅಂಬಾನಿ ಕುಟುಂಬದ ಮದುವೆಗೆ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರು ಪ್ರತ್ಯೇಕವಾಗಿ ಆಗಮಿಸಿದ್ದರು. ಇದರಿಂದ ಜನರ ಅನುಮಾನ ಜಾಸ್ತಿ ಆಗಿತ್ತು. ಈಗ ಅಭಿಷೇಕ್ ಬಚ್ಚನ್ ಅವರು ಒಂಟಿಯಾಗಿ ಪ್ಯಾರಿಸ್ನಲ್ಲಿ ಸುತ್ತಾಟ ನಡೆಸಿದ್ದಾರೆ.
ಒಲಂಪಿಕ್ಸ್ ನೋಡಲು ಅಭಿಷೇನ್ ಬಚ್ಚನ್ ಅವರು ಪ್ಯಾರಿಸ್ಗೆ ತೆರಳಿದ್ದರು. ನೀರಜ್ ಚೋಪ್ರಾ ಜಾವೆಲಿನ್ ಎಸೆತದಲ್ಲಿ ಪದಕ ಗೆದ್ದಿದ್ದನ್ನು ಅಭಿಷೇಕ್ ಬಚ್ಚನ್ ಕಣ್ತುಂಬಿಕೊಂಡಿದ್ದಾರೆ. ಪದಕ ಗೆದ್ದ ಅವರನ್ನು ಅಭಿಷೇಕ್ ತಬ್ಬಿಕೊಂಡಿದ್ದಾರೆ. ಸ್ಟೇಡಿಯಂನಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ಅವರು ಸಂಭ್ರಮಿಸಿದ್ದಾರೆ. ಬಳಿಕ ಐಫೆಲ್ ಟವರ್ಗೆ ಭೇಟಿ ನೀಡಿ ಎಂಜಾಯ್ ಮಾಡಿದ್ದಾರೆ.
ಪ್ಯಾರಿಸ್ನಲ್ಲಿ ಅಭಿಷೇಕ್ ಬಚ್ಚನ್ ಅವರು ಸುತ್ತಾಟ ನಡೆಸಿದಾಗ ಐಶ್ವರ್ಯಾ ರೈ ಇರಲಿಲ್ಲ. ಜನರು ಈ ಬಗ್ಗೆ ಖಂಡಿತವಾಗಿಯೂ ಪ್ರಶ್ನೆ ಕೇಳುತ್ತಾರೆ ಎಂಬುದು ಸ್ವತಃ ಅಭಿಷೇಕ್ ಅವರಿಗೂ ಗೊತ್ತು. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಾಗ ಅವರು ಕಮೆಂಟ್ ಮಾಡುವ ಆಯ್ಕೆಯನ್ನು ಆಫ್ ಮಾಡಿದ್ದಾರೆ. ಜನರು ಎತ್ತಬಹುದಾದ ಡಿವೋರ್ಸ್ ವದಂತಿ ಬಗೆಗಿನ ಪ್ರಶ್ನೆಗಳಿಂದ ತಪ್ಪಿಕೊಳ್ಳಲು ಅಭಿಷೇಕ್ ಬಚ್ಚನ್ ಈ ರೀತಿ ಮಾಡಿದ್ದಾರೆ ಎನ್ನಲಾಗುತ್ತಿದೆ.