ಗದಗ: ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದ ರೈತ ಮುದುಕಪ್ಪ ಯಲ್ಲಪ್ಪ ಶಿಗರಗಡ್ಡಿ ಇವರಿಗೆ ಸೇರಿದ ಎರಡು ಮೇವಿನ ಬಣವಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಬೂದಿಯಾದ ಘಟನೆ ಭಾನುವಾರ ಮಧ್ಯಾಹ್ನ ಸಂಭವಿಸಿದೆ.
ಲಕ್ಷಾಂತರ ರೂಪಾಯಿ ಮೌಲ್ಯದ ಮೇವು ಬೆಂಕಿಯ ಕೆನ್ನಾಲಿಗೆ ಆಹುತಿಯಾಗಿದೆ ರೈತ ಮುದುಕಪ್ಪ ಯಲ್ಲಪ್ಪ ಶಿಗರಗಡ್ಡಿ ತನ್ನ ಜಮೀನಿನಲ್ಲಿ ಬೆಳೆದ ಜೋಳದ ಮೇವನ್ನು ಜಾನುವಾರುಗಳಿಗೆ ಸಂಗ್ರಹಿಸಿ ಬಣವೆ ಹೋಟ್ಟಿದ್ದನ್ನು ಈಗ ಬಣವಿ ಸುಟ್ಟು ಬೂದಿಯಾಗಿ ಜಾನುವಾರುಗಳಿಗೆ ಮೇವು ಇಲ್ಲದಂತಾಗಿದೆ ಕಂಗಾಲಾಗಿ ಹೋಗಿದ್ದಾನೆ .
ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಲು ಗದಗ ನಗರದಿಂದ ಬರುವಷ್ಟರಲ್ಲಿ ಬಣವಿಗಳು ಸುಟ್ಟು ಬೂದಿಯಾಗಿ ಹೋಗಿದೆ.
ಘಟನಾ ಸ್ಥಳಕ್ಕೆ ತಹಶೀಲ್ದಾರ ಭೇಟಿ ನೀಡಿ ಸೂಕ್ತ ಪರಿಹಾರ ನೀಡಬೇಕೆಂದು ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ ಆಗ್ರಹಿಸಿದ್ದಾರೆ.