ಉತ್ತರ ಪ್ರದೇಶ:- ಉತ್ತರಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ವೆಬ್ ಸಿರೀಸ್ ನೋಡಿ ಕೊಲೆ ಮಾಡಿದ ಘಟನೆ ಜರುಗಿದೆ.
ಕೃಷ್ಣ ಶರ್ಮಾ ಎಂಬ ಹೋಟೆಲ್ ಮಾಲೀಕನ ಮಗ ಕುನಾಲ್ ಶರ್ಮಾನನ್ನು ಮೇ 1 ರಂದು ಹೋಟೆಲ್ನಿಂದ ಅಪಹರಿಸಿದ್ದಾರೆ.
ಮೇ 5 ರಂದು ಬುಲಂದ್ಶಹರ್ನ ಕಾಲುವೆಯಲ್ಲಿ ಕುನಾಲ್ನ ಶವ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿಂದತೆ ಬುದ್ಧವಾರ ರಾತ್ರಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಇದೀಗ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗಿದೆ. ತನಿಖೆ ವೇಳೆ ಭಯಾನಕ ವಿಚಾರಗಳನ್ನು ಕೊಲೆಗಾರರು ಬಿಚ್ಚಿಟ್ಟಿದ್ದಾರೆ.
ಕೊಲೆ ಮಾಡಲು ಒಂದು ತಿಂಗಳ ಹಿಂದೆಯೇ ಇದಕ್ಕೆ ಯೋಜನೆಯನ್ನು ಮಾಡಲಾಗಿತ್ತು. ಕೊಲೆ ಮಾಡಿ ಪೊಲೀಸರಿಂದ ತಪ್ಪಿಸಿಕೊಳ್ಳುವುದು ಹೇಗೆ ಮತ್ತು ಮೃತ ದೇಹವನ್ನು ವಿಲೇವಾರಿ ಮಾಡುವುದು ಹೇಗೆ? ಎಂಬುದಕ್ಕೆ ಈ ನಾಲ್ವರೂ ಅನೇಕ ವೆಬ್ ಸರಣಿಗಳನ್ನು ವೀಕ್ಷಿಸಿದ್ದಾರೆ. ಅದೇ ರೀತಿಯಲ್ಲಿ ಪ್ಲಾನ್ ಮಾಡಿಕೊಂಡಿದ್ದಾರೆ. ಕೊಲೆಗಾರರ ಬೆರಳಚ್ಚುಗಳು ಮೃತದೇಹದ ಮೇಲೆ ಉಳಿದಿದ್ದ ಕಾರಣ ಇದರಿಂದ ನಮ್ಮನ್ನು ಪೊಲೀಸರು ಪತ್ತೆ ಮಾಡಬಹುದು ಎಂದು, ಕುನಾಲ್ ದೇಹವನ್ನು ಡೆಟಾಲ್ನಿಂದ ತೊಳೆದಿದ್ದಾರೆ. ನಂತರ ಕುನಾಲ್ ಮೃತದೇಹವನ್ನು ಬೆತ್ತಲೆ ಮಾಡಿ ಕಾಲುವೆಗೆ ಎಸೆದಿದ್ದಾರೆ. ಇದರಿಂದ ದೇಹದ ಮೇಲೆ ಯಾವುದೇ ಗುರುತುಗಳಿದ್ದರೂ, ಅವುಗಳನ್ನು ನೀರಿನಿಂದ ತೊಳೆಯಬಹುದು ಎಂದು ತಿಳಿದುಕೊಂಡಿದ್ದರು. ಈ ಸತ್ಯವನ್ನು ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾರೆ. ಅಪರಾಧ ಎಸಗಿದ ನಂತರ ಸಾಕ್ಷ್ಯ ನಾಶಪಡಿಸುವುದು ಮತ್ತು ಪೊಲೀಸರಿಂದ ರಕ್ಷಿಸುವುದು ಅವರ ಉದ್ದೇಶವಾಗಿತ್ತು ಎಂದು ಆರೋಪಿಗಳು ತಿಳಿಸಿದ್ದಾರೆ