ಗಾಜಿಯಾಬಾದ್:- ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಕಾಮುಕನೊಬ್ಬ ಹೆಣ್ಣು ನಾಯಿಯ ಮೇಲೆ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ಜರುಗಿದ್ದು, ಆರೋಪಿಯನ್ನು ಇದೀಗ ಅರೆಸ್ಟ್ ಮಾಡಲಾಗಿದೆ.
ಆರೋಪಿಯನ್ನು ಸುರೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ. ಗಾಜಿಯಾಬಾದ್ನ ಮೋದಿನಗರದಲ್ಲಿ ನಿವಾಸಿ ನಾಯಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಸುರೇಂದ್ರ ಸಿಂಗ್ ಮುಗ್ಧ ಪ್ರಾಣಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ ಎಂದು ಸುರಭಿ ರಾವತ್ ಎಂಬುವರು ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ. ಇಂತಹ ದುಷ್ಕೃತ್ಯಗಳನ್ನು ಕೇವಲ ಪ್ರಾಣಿಗಳ ಕ್ರೌರ್ಯ ಎಂದು ವರ್ಗೀಕರಿಸಬಾರದು. ಕಠಿಣ ಕಾನೂನು ಕ್ರಮದ ಅಗತ್ಯವಿದೆಯೇ ಎಂದು ಹೇಳಿದ್ದಾರೆ. ಘೋರ ವರ್ತನೆಗಾಗಿ ಆ ವ್ಯಕ್ತಿಯನ್ನು ಜೈಲಿಗೆ ಹಾಕಬೇಕೆಂದು ಅವರು ಒತ್ತಾಯಿಸಿದ್ದಾರೆ.
ಈ ಪೋಸ್ಟ್ ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಜೊತೆಗೆ ಗ್ರಾಮೀಣ ಡಿಸಿಪಿ, ಗಾಜಿಯಾಬಾದ್ ಪೊಲೀಸ್ ಮತ್ತು ಯುಪಿ ಪೊಲೀಸರು ಸೇರಿದಂತೆ ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಟ್ಯಾಗ್ ಮಾಡಲಾಗಿದೆ. ಪ್ರಾಣಿಗಳ ಮೇಲಿನ ಇಂತಹ ದೌರ್ಜನ್ಯಗಳ ವಿರುದ್ಧ ಸಮಾಜವು ಧ್ವನಿ ಎತ್ತದಿದ್ದರೆ ಈ ರಾಕ್ಷಸರು ಮುಂದೆ ದುರ್ಬಲ ಮಕ್ಕಳು ಮತ್ತು ಮಹಿಳೆಯರನ್ನು ಗುರಿಯಾಗಿಸಬಹುದು ಎಂದು ರಾವತ್ ಅಭಿಪ್ರಾಯಪಟ್ಟಿದ್ದಾರೆ. ಕ್ರೌರ್ಯದ ಕೃತ್ಯಗಳನ್ನು ಅವರು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.