ಬೆಂಗಳೂರು:- ಅರ್ಧ ಬೆಲೆಗೆ ದುಬೈ ಕರೆನ್ಸಿ ಕೊಡ್ತಿನಿ ಅಂತ ಕಲರ್ ಜೆರಾಕ್ಸ್ ಪೇಪರ್ ಕೊಡ್ತಿದ್ದ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ದೆಹಲಿ ಮೂಲದ ಇಮ್ರಾನ್ ಶೇಕ್ ಬಂಧಿತ ಆರೋಪಿ. ಈತನ ಜೋಡಿ ರುಕ್ಸಾನ ಎಸ್ಕೇಪ್ ಆಗಿದ್ದಾರೆ.
ಆರೋಪಿಗಳು, ದುಬೈ ಕರೆನ್ಸಿ ಧಿರಾಮ್ ಎಂದು ನಂಬಿಸಿ ಕಲರ್ ಜೆರಾಕ್ಸ್ ಕೊಡುತ್ತಿದ್ದರು. ಈ ಕಿಲಾಡಿ ಜೋಡಿ, ಉದ್ಯಮಿಗಳನ್ನ ಪರಿಚಯ ಮಾಡಿಕೊಳ್ಳುತ್ತಿದ್ದ. ನಮ್ಮತ್ರ ಸಾಕಷ್ಟು ದುಬೈ ಕರೆನ್ಸಿ ಇದೆ ಆದ್ರೆ ಎಲ್ಲಾ ಕರೆನ್ಸಿನಾ ಎಕ್ಸ್ ಚೇಂಜ್ ಮಾಡೋದು ಕಷ್ಟ ಎನ್ನುತ್ತಿದ್ದರು. ಒಂದು ಧಿರಾಮ್ ಗೆ 22-25 ರೂಪಾಯಿ ಆಗುತ್ತೆ. ಆದರೆ ಕಿಲಾಡಿಗಳು 12 ರೂಪಾಯಿ ಕೊಟ್ರೆ ಧಿರಾಮ್ ಕೊಡ್ತಿವಿ ಎಂದು ನಂಬಿಸುತ್ತಿದ್ದರು. ಉದ್ಯಮಿಗಳನ್ನು ನಂಬಿಸಲು ಒಂದು ಅಸಲಿ ಕರೆನ್ಸಿ ಕೊಟ್ಟು ಚೆಕ್ ಮಾಡಿಕೊಳ್ಳಿ ಅಂತ ಬಿಡ್ತಿದ್ರು. ಯಾಮಾರಿದವರು ಹಣ ರೆಡಿ ಮಾಡಿಕೊಂಡು ಕರೆನ್ಸಿ ಎಕ್ಸ್ ಚೇಂಜ್ ಗೆ ಮುಂದಾಗ್ತಿದ್ರು.ನಂತರ ಆರೋಪಿ ಶೇಕ್ ಹಣ ಪಡೆದು ಜೆರಾಕ್ಸ್ ನೋಟ್ ಕೈಗಿಟ್ಟು ಎಸ್ಕೇಪ್ ಆಗ್ತಿದ್ದ. ಸದ್ಯ ಆರೋಪಿ ಇಮ್ರಾನ್ ಶೇಕ್ ನ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತನಿಂದ ಸುಮಾರು ನೂರಕ್ಕು ಹೆಚ್ಚು ನಕಲಿ ಧಿರಾಮ್ ಸೀಜ್ ಮಾಡಲಾಗಿದೆ. ಇಮ್ರಾನ್ ಜೊತೆಗಿದ್ದ ರುಕ್ಸಾನ ಬಳಿ ಮತ್ತಷ್ಟು ನಕಲಿ ಕರೆನ್ಸಿ ಇರುವ ಸಾಧ್ಯತೆ ಇದೆ. ಎಸ್ಕೇಪ್ ಆಗಿರುವ ರುಕ್ಸಾನಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.