ಶಿವಮೊಗ್ಗ: ನಿಗದಿತ ಸಮಯಕ್ಕೆ ಮಳೆಯಾಗದಿದ್ದರೆ ಮೋಡಬಿತ್ತನೆ ಮಾಡುವುದು ಅನಿವಾರ್ಯವಾಗಿದೆ. ಈ ವಿಟಾರದಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಕುಡಿಯುವ ನೀರಿನ ವಿಚಾರವಾಗಿ ಟಾಸ್ಕ್ ಫೋರ್ಸ್ ನೊಂದಿಗೆ ಸಭೆ ನಡೆಸಿದ ನಂತರ ಮಾದ್ಯಮದ ಜೊತೆ ಮಾತನಾಡಿದ ಮಧು ಬಂಗಾರಪ್ಪ ಶಿವಮೊಗ್ಗ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟಾರೆಯಾಗಿ ಇಪ್ಪತ್ತು ದಿನಗಳಿಗಾಗುವಷ್ಟು ಕುಡಿಯುವ ನೀರನ್ನು ಪೂರೈಸಬಹುದಾಗಿದೆ.ಅಷ್ಟರೊಳಗೆ ಮಳೆಯಾದರೆ ಪರವಾಗಿಲ್ಲ. ಮಳೆಯಾಗದೆ ಹೋದರೆ, ನೀರಿನ ಸಮಸ್ಯೆಯಿರುವ ತಾಲೂಕುಗಳಲ್ಲಿ ಟ್ಯಾಂಕರ್ ಇಲ್ಲವೇ ಬೋರ್ ವೆಲ್ ಹಾಗು ಖಾಸಗಿ ಬೋರ್ ವೆಲ್ ಮೂಲಕ ನೀರು ಕಲ್ಪಿಸಲು ಸಿದ್ದತೆ ನಡೆಸಲಾಗಿದೆ ಎಂದರು. ಅತಿವೃಷ್ಟಿ ಅನಾವೃಷ್ಟಿಯಿಂದ ಜಿಲ್ಲೆಯಲ್ಲಿ ನೀಕಿದೆ ಸಮಸ್ಯೆಯಾಗುತ್ತಿದೆ.
ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರೀಯಾ ಯೋಜನೆ ರೂಪಿಸಬೇಕಿದೆ. ನಿಗದಿತ ಸಮಯದಲ್ಲಿ ಮಳೆಯಾಗದಿದ್ದರೆ ಮೋಡಬಿತ್ತನೆ ಮಾಡುವ ಪ್ರಸ್ಥಾಪವೂ ಕೂಡ ಇದೆ. ಮೋಡಬಿತ್ತನೆ ಕೆಲವು ಸಂದರ್ಭದಲ್ಲಿ ಸಮರ್ಪಕವಾಗಿ ಯಶಸ್ವಿಯಾಗಿದ್ದರೂ, ಕೆಲವು ಸಂದರ್ಭದಲ್ಲಿ ಯಶಸ್ವಿಯಾಗಿಲ್ಲ ಎಂದು ಹೇಳಿದರು.ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬರ ಬರುತ್ತೆ ಎಂದು ಸಂಸದ ಬಿ.ವೈ ರಾಘವೇಂದ್ರ ನೀಡಿದ ಹೇಳಿಕೆಗೆ ಮಧು ಬಂಗಾರಪ್ಪ ತೀಕ್ಷ್ಣವಾಗಿ ಪ್ರತಿಕ್ರೀಯಿಸಿದ್ದಾರೆ.