ಹಾಸನ: ಕುಕ್ಕೆ ಸುಬ್ರಹ್ಮಣ್ಯ-ಧರ್ಮಸ್ಥಳಕ್ಕೆ ನೂತನ ರೈಲು ಸಂಪರ್ಕ ಹಾಗೂ ಮಂಗಳೂರು – ಬೆಂಗಳೂರು ನಡುವೆ ಹೆಚ್ಚುವರಿಯಾಗಿ ಒಂದು ರೈಲು ಸಂಚಾರ ಸೌಲಭ್ಯ ಕಲ್ಪಿಸಲು ಶೀಘ್ರವೇ ಆದೇಶ ಹೊರಡಿಸಲಾಗುವುದು ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ ಸೋಮಣ್ಣ ತಿಳಿಸಿದರು.
ಹಾಸನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿ,
“ಸಕಲೇಶಪುರ – ಸುಬ್ರಹ್ಮಣ್ಯ ನಡುವಿನ ಸಂಚಾರ ತೀವ್ರ ವಿಳಂಬವಾಗುತ್ತಿದ್ದು, ಆ ಮಾರ್ಗದಲ್ಲಿ ಡಬ್ಲಿಂಗ್ ಮಾಡಲು ಸಾಧ್ಯವಿಲ್ಲದ ಕಾರಣ ಪರ್ಯಾಯ ರೂಪ ನೀಡುವ ಕುರಿತು ಚಿಂತನೆ ನಡೆಸಲಾಗುತ್ತಿದೆ,” ಎಂದು ಹೇಳಿದರು. “ಮಂಗಳೂರು – ಬೆಂಗಳೂರು ನಡುವೆ ಬೆಳಗ್ಗೆ ಹಾಗೂ ಸಂಜೆ ರೈಲಿಗೆ ಬೇಡಿಕೆ ಬಂದಿದ್ದು, ಶೀಘ್ರವೇ ಹೊಸ ರೈಲು ಸಂಚಾರ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು,” ಎಂದರು.