ಬಾಲಿವುಡ್ ಸಿನಿಮಾ ಇಂಡಸ್ಟ್ರಿಯ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಸದ್ಯ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ನಲ್ಲಿ ಕಾಣಿಸಿಕೊಂಡಿದ್ದಾರೆ. ರಿಯಾಲಿಟಿ ಶೋ, ಪ್ರಶಸ್ತಿ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದ ಆಮಿರ್ ಸಾಕಷ್ಟು ಸಮಯದ ಬಳಿಕ ಕಾರ್ಯಕ್ರಮವೊಂದಲ್ಲಿ ಕಾಣಿಸಿಕೊಂಡು ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಅಮೀರ್ ಖಾನ್ ಸಿನಿ ಜರ್ನಿ ಹಾಗೂ ವೈಯಕ್ತಿಕ ವಿಚಾರಗಳ ಬಗ್ಗೆ ಮಾತಾಡಿದ್ದಾರೆ. ಮೊದಲ ಪತ್ನಿ ರೀನಾ ದತ್ತಾ ಬಗ್ಗೆ ನಟ ಹೇಳಿಕೊಂಡಿದ್ದಾರೆ.
‘ನನ್ನ ಹಿರಿಯ ಮಗ ಜುನೈದ್ ಜನನದ ವೇಳೆ ರೀನಾ ಜಿ ಹೆರಿಗೆ ನೋವಿನಿಂದ ಬಳಲುತ್ತಿದ್ದರು. ನಾವು ಆಸ್ಪತ್ರೆಯಲ್ಲಿದ್ದೆವು. ಒಳ್ಳೆ ಗಂಡನಾದ ನಾನು ಅವಳೊಂದಿಗೆ ಉಸಿರಾಟದ ವ್ಯಾಯಾಮ ಮಾಡಿದ್ದೆ. ಅವಳ ಹೆರಿಗೆ ನೋವು ಹೆಚ್ಚಾದಾಗ, ನಾನು ಉಸಿರಾಟದ ವ್ಯಾಯಾಮದ ಮೂಲಕ ಅವಳನ್ನು ಕೂಲ್ ಮಾಡಲು ಪ್ರಯತ್ನಿಸಿದೆ, ಈ ವೇಳೆ ರೀನಾ ನೋವಿನಲ್ಲೇ ನನ್ನ ಕೆನ್ನೆಗೆ ಬಾರಿಸಿದಳು. ಸ್ಟಾಪ್ ನಾನ್ಸೆಸ್ ಎಂದು ಬೈದಳು. ಆಕೆ ತುಂಬಾ ನೋವಿನಲ್ಲಿದ್ದಳು. ರೀನಾ ತನ್ನ ಕೈಯನ್ನು ನೋವಿನಿಂದ ಕಚ್ಚಿಕೊಂಡಿದ್ದಳು ಎಂದು ಅಮೀರ್ ಖಾನ್ ಹೇಳಿದ್ದಾರೆ.
ಆ ಸಮಯದಲ್ಲಿ ರೀನಾಜಿ ತುಂಬಾ ನೋವಿನಿಂದ ಬಳಲುತ್ತಿದ್ದಾಗ ಆಕೆಯ ಮುಖದ ಭಾವವು ಸಂಪೂರ್ಣವಾಗಿ ವಿಭಿನ್ನವಾಗಿತ್ತು. ಏನೋ ಆಶ್ಚರ್ಯವಿದೆಯಂತೆ. ರೀನಾ ಜುನೈದ್ ಜೊತೆ ಮನೆಗೆ ಬಂದಾಗ, ನಾನು ಅವಳಿಗೆ ಹೇಳಿದ್ದೇನೆ. ನೀವು ನೋವು ಅನುಭವಿಸಿದಾಗ, ನಿಮಗೆ ಆಶ್ಚರ್ಯ ಮತ್ತು ಆಘಾತವಾಯಿತು. ನಾನು ನೋವಿನಲ್ಲಿದ್ದೇನೆ ಮತ್ತು ನನ್ನ ಎಕ್ಸ್ಪ್ರೆಶನ್ ಅನ್ನು ನೀವು ಗಮನಿಸುತ್ತಾ ನಿಂತಿದ್ರಾ ಎಂದು ರೀನಾ ತುಂಬಾ ಕೋಪಗೊಂಡಿದ್ರು ಎಂದು ಅಮೀರ್ ಖಾನ್ ಮೊದಲ ಹೆಂಡತಿಯ ಬಗ್ಗೆ ಹೇಳಿದ್ದಾರೆ.
ವಿವಾಹವಾದ ನಂತರ 16 ವರ್ಷಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದರು. ಇದಾದ ನಂತರ ಇಬ್ಬರೂ ಪರಸ್ಪರ ವಿಚ್ಛೇದನ ಪಡೆದು ದೂರವಾದರು. ಅಮೀರ್ ಮತ್ತು ರೀನಾ ಅವರಿಗೆ ಜುನೈದ್ ಮತ್ತು ಇರಾ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ರೀನಾ ದತ್ತಾರಿಂದ ಬೇರ್ಪಟ್ಟ ನಂತರ, ಅಮೀರ್ ಖಾನ್ ಕಿರಣ್ ರಾವ್ ಅವರನ್ನು ಎರಡನೇ ಬಾರಿಗೆ ವಿವಾಹವಾದರು, ಆದರೆ ಈ ಸಂಬಂಧವೂ ಹೆಚ್ಚು ಕಾಲ ಉಳಿಯಲಿಲ್ಲ.