ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ ಅವರಿಗೆ ವಿಚಿತ್ರ ಆಸೆ ಇದೆಯಂತೆ. ಆ ಆಸೆಯನ್ನು ನಟ ಕಾಮಿಡಿ ವಿತ್ ಕಪಿಲ್ ಶೋನಲ್ಲಿ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ಅಮೀರ್ ಖಾನ್ ರ ವಿಚಿತ್ರ ಆಸೆ ಕೇಳಿದ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಶಾರ್ಟ್ಸ್ ಧರಿಸಿಕೊಂಡು ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎನ್ನುವುದು ಆಮೀರ್ ಅವರಿಗೆ ಇರುವ ಆಸೆಯಂತೆ. ಆದರೆ ಅದಕ್ಕೆ ಮಕ್ಕಳು ಬಿಡುವುದಿಲ್ಲ. ನನ್ನ ಮಕ್ಕಳು ನನ್ನ ಮಾತನ್ನು ಕೇಳೋದಿಲ್ಲ ಎಂದೂ ಅವರು ಹೇಳಿದ್ದು, ಜೊತೆಗೆ ಪ್ರಶಸ್ತಿ ಸಮಾರಂಭಕ್ಕೆ ತಾವು ಏಕೆ ಹೋಗುವುದಿಲ್ಲ ಎನ್ನುವುದನ್ನೂ ಹೇಳಿದ್ದಾರೆ.
ಆಮೀರ್ ಖಾನ್ ಬಾಲಿವುಡ್ ಕಂಡ ಅದ್ಭುತ ನಟ ಹಾಗೂ ನಿರ್ಮಾಪಕ. ಎರಡು ಮದುವೆಯಾಗಿ ಇಬ್ಬರಿಗೂ ಡಿವೋರ್ಸ್ ಕೊಟ್ಟಿದ್ದರು. ಈಗಲೂ ಇಬ್ಬರ ಜೊತೆಯೂ ಪ್ರೀತಿಯಿಂದ ನಡೆದುಕೊಳ್ಳುತ್ತಾರೆ. ಅಗತ್ಯ ಬಿದ್ದಾಗ ಭೇಟಿ ಮಾಡುತ್ತಾರೆ. ಜೊತೆಗೆ ಮಕ್ಕಳನ್ನು ಜತನದಿಂದ ಕಾಪಾಡಿಕೊಂಡಿದ್ದು ಇತ್ತೀಚೆಗೆ ಓರ್ವ ಮಗಳ ಮದುವೆ ಮಾಡಿದ್ದಾರೆ. ಸದ್ಯ ಅಮಿರ್ ಭಾಗಿಯಾಗಿರುವ ಕಾಮಿಡಿ ವಿತ್ ಕಪಿಲ್ ಶೋನಲ್ಲಿ ಕಾರ್ಯಕ್ರಮದ ಪ್ರವೋ ಬಿಡುಗಡೆ ಆಗಿದ್ದು ಸದ್ಯದಲ್ಲೇ ಕಾರ್ಯಕ್ರಮ ಪ್ರಸಾರವಾಗಲಿದೆ.