ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸುಮತಲಾ ಪುತ್ರ ಅಭಿಷೇಕ್ ಅಂಬರೀಶ್ ಮದುವೆ ಡೇಟ್ ಫಿಕ್ಸ್ ಆಗಿದೆ. ಇದೇ ಜೂನ್ 5ರಂದು ಅಭಿಷೇಕ್ ಹಾಗೂ ಅವಿವಾ ಅದ್ದೂರಿಯಾಗಿ ಹಸೆಮಣೆ ಏರುತ್ತಿದ್ದಾರೆ. ಇದೀಗ ಅಭಿಷೇಕ್ ತಾಯಿ ಸುಮಲತಾ ಜೊತೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ಪತ್ರಿಕೆ ನೀಡಿದ್ದಾರೆ. ಸದ್ಯ ಈ ಫೋಟೋ ವೈರಲ್ ಆಗಿದೆ.
ಇತ್ತೀಚೆಗಷ್ಟೇ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಅದ್ದೂರಿಯಾಗಿ ಎಂಗೇಜ್ ಮೆಂಟ್ ಆಗಿದ್ದಾರೆ. ಹಲವು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಲು ಅಭಿಷೇಕ್ ಜೋಡಿ ರೆಡಿಯಾಗಿದ್ದು, ಅವಿವಾ ಮತ್ತು ಅಭಿಷೇಕ್ ಮದುವೆಗೆ ಈಗಾಗಲೇ ದಿನಗಣನೆ ಶುರುವಾಗಿದೆ.
ಈಗಾಗಲೇ ಕೆಲ ಗಣ್ಯರಿಗೆ ಮದುವೆ ಆಹ್ವಾನ ಪತ್ರಿಕೆ ನೀಡಿದರು ಅಭಿಷೇಕ್ ಅಂಬರೀಶ್ ಇದೀಗ ಮೋದಿ ಅವರನ್ನು ಭೇಟಿಯಾಗಿ ಆಹ್ವಾನ ಪತ್ರಿಕೆ ನೀಡಿದ್ದಾರೆ. ಅಭಿಷೇಕ್-ಅವಿವಾ ಅವರ ಮದುವೆ ಪತ್ರಿಕೆ ನೀಡಿ ಕೆಲ ಸಮಯ ಮೋದಿಯೊಂದಿಗೆ ಕಾಲ ಕಳೆದಿದ್ದಾರೆ.
ಜೂನ್ 5ಕ್ಕೆ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ನಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದ್ದು, ಸಿನಿಮಾ ರಂಗ-ರಾಜಕೀಯ ರಂಗದ ಗಣ್ಯರು ಮದುವೆಗೆ ಭಾಗಿಯಾಗಲಿದ್ದಾರೆ. ಸ್ಯಾಂಡಲ್ ವುಡ್ ಜೊತೆಗೆ ಪರಭಾಷೆಯ ಕಲಾವಿದರು ಮದುವೆಯಲ್ಲಿ ಭಾಗವಹಿಸುತ್ತಿದ್ದಾರೆ.