ತಮಿಳು ನಟ ಸಿನಿಮಾಗಳಲ್ಲಿ ಮಾತ್ರವಲ್ಲಿ ಕಾರ್ ರೇಸ್ ನಲ್ಲೂ ಆಗಾಗ ಭಾಗಿಯಾಗುತ್ತಿರುತ್ತಾರೆ. ಕೆಲ ದಿನಗಳ ಹಿಂದೆ ಬೈಕ್ ಹತ್ತಿ 3 ದೇಶ ಸುತ್ತಿ ಬಂದಿದ್ದ ನಟ ಅಜಿತ್ ಇತ್ತೀಚೆಗೆ ದುಬೈ ಕಾರ್ ರೇಸ್ನಲ್ಲಿ ಭಾಗಿ ಆಗಿದ್ದರು. ಇತ್ತೀಚೆಗೆ ಟ್ರ್ಯಾಕ್ನಲ್ಲಿ ಕಾರ್ ಚಲಾಯಿಸುವಾಗ ಅವಘಡ ಸಂಭವಿಸಿದ್ದು ಇದೀಗ ಕಾರ್ ರೇಸ್ ನಲ್ಲಿ ಗೆದ್ದು ತ್ರಿವರ್ಣ ಧ್ವನ ಹಾರಿಸಿದ್ದಾರೆ.
‘ದುಬೈ 24 ಅವರ್ಸ್ ರೇಸ್’ (24 ಹೆಚ್ ದುಬೈ 2025) ಸ್ಪರ್ಧೆಯಲ್ಲಿ ಅಜಿತ್ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ‘ಸ್ಪಿರಿಟ್ ಆಫ್ ರೇಸ್’ ಟೈಟಲ್ ಅನ್ನು ತಂಡ ತನ್ನದಾಗಿಸಿಕೊಂಡಿದ್ದು ಸದ್ಯ ಈ ವಿಡಿಯೋ ಹಾಗೂ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜೊತೆಗೆ ಪತ್ನಿಗೆ ಮುತ್ತಿಟ್ಟು ಅಜಿತ್ ಸಂಭ್ರಮಿಸಿದ್ದಾರೆ. ತ್ರಿವರ್ಣ ಧ್ವಜ ಹಿಡಿದು ನಟ ರ್ಯಾಕಿಂಗ್ ಸ್ಟ್ಯಾಂಡ್ ಏರಿದ್ದಾರೆ.
13 ವರ್ಷಗಳ ಬಳಿಕ ನಟ ಅಜಿತ್ ರೇಸಿಂಗ್ನಲ್ಲಿ ಭಾಗವಹಿಸಿದ್ದರು. ಇತ್ತೀಚೆಗೆ ತಾಲೀಮು ನಡೆಸುವ ವೇಳೆ ಕಾರ್ ಅಪಘಾತವಾಗಿತ್ತು. ಆದರೆ ಯಾವುದೇ ಸಮಸ್ಯೆ ಇಲ್ಲದೇ ಪಾರಾಗಿದ್ದರು.
ಅಜಿತ್ ಕಾರ್ ರೇಸ್ನಲ್ಲಿ ಗೆಲ್ಲುತ್ತಿದ್ದಂತೆ ಆಪ್ತರು, ರಾಜಕೀಯ ಮುಖಂಡರು, ಸಿನಿಮಾ ತಾರೆಯರು, ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ. ತೆಲುಗು ನಟ ನಾಗಚೈತನ್ಯಗೂ ಕಾರ್ ರೇಸ್ ಕ್ರೇಜ್ ಇದೆ. ಹಾಗಾಗಿ ಅಜಿತ್ ಗೆಲುವು ಸಾಧಿಸುತ್ತಿದ್ದಂತೆ ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ. ನಟ, ರಾಜಕೀಯ ಮುಖಂಡ ಕಮಲ್ ಹಾಸನ್, ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್ ಸೇರಿದಂತೆ ಹಲವರು ಟ್ವೀಟ್ ಮೂಲಕ ಅಭಿನಂದನೆ ತಿಳಿಸಿದ್ದಾರೆ.