2019ರಲ್ಲಿ ತೆರೆಗೆ ಬಂದ ಬಹುತಾರಾಗಣದ ಕುರುಕ್ಷೇತ್ರ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. 3ಡಿ 2ಮೋಡಿಯಲ್ಲಿ ಈ ಪೌರಾಣಿಕ ಯುದ್ಧದ ಸಿನಿಮಾವನ್ನು ನಿರ್ಮಾಪಕ ಮುನಿರತ್ನ ಅದ್ದೂರಿಯಾಗಿ ನಿರ್ಮಾಣ ಮಾಡಿದ್ರೆ, ಚಿತ್ರದಲ್ಲಿ ನಟ ದರ್ಶನ್ ದುರ್ಯೋಧನನಾಗಿ ಕಾಣಿಸಿಕೊಂಡಿದ್ದರು. ಅಚ್ಚರಿ ಅಂದ್ರೆ ಈ ಸಿನಿಮಾದ ಇಬ್ಬರು ಈಗ ಜೈಲು ಸೇರಿದ್ದಾರೆ.
ಹೌದು. ಕುರುಕ್ಷೇತ್ರ ಸಿನಿಮಾಗೆ ಬಂಡವಾಳ ಹೂಡಿದ್ದ ಮುನಿರತ್ನ ಹಾಗೂ ದುರ್ಯೋಧನನಾಗಿ ಅಬ್ಬರಿಸಿದ ದರ್ಶನ್ ಇಬ್ಬರು ಈಗ ಜೈಲು ಸೇರಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಬಳ್ಳಾರಿ ಜೈಲು ಸೇರಿದ್ರೆ ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಕೇಸ್ ನಲ್ಲಿ ಮುನಿರತ್ನರನ್ನು ಬಂಧಿಸಲಾಗಿದೆ.
ಮುನಿರತ್ನ ರಾಜಕೀಯದ ಜೊತೆಗೆ ಕನ್ನಡ ಚಿತ್ರರಂಗದಲ್ಲೂ ಉತ್ತಮ ನಂಟು ಹೊಂದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮುನಿರತ್ನ ಪ್ರತಿಷ್ಠಿತ ನಿರ್ಮಾಪಕ ಆಗಿದ್ದವರು. ಅಷ್ಟೇ ಅಲ್ಲ ನಿರ್ಮಾಪಕರ ಸಂಘದ ಅಧ್ಯಕ್ಷ ಕೂಡ ಆಗಿದ್ರು.
2002ರಲ್ಲಿ ಕಂಬಾಲಪಲ್ಲಿ ಅನ್ನೋ ಸಿನಿಮಾ ನಿರ್ಮಿಸೋ ಮೂಲಕ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟ ಮುನಿರತ್ನ ಸ್ಯಾಂಡಲ್ ವುಡ್ ನ ಅನೇಕ ಬಿಗ್ ಹೀರೋ ಗಳ ಜೊತೆಗೆ ಸಿನಿಮಾ ಮಾಡಿದ್ರು. ಉಪೇಂದ್ರ ನಟನೆಯ ರಕ್ತಕಣ್ಣೀರು ಮತ್ತು ಕಠಾರಿವೀರ ಸುರಸುಂದರಾಂಗಿ ಸಿನಿಮಾಗಳೀಗೂ ಬಂಡವಾಳ ಹೂಡಿದ್ದರು.
2019ರಲ್ಲಿ ಮುನಿರತ್ನ ಕುರುಕ್ಷೇತ್ರ ಪೌರಾಣಿಕ ಯುದ್ಧಕಥೆಯನ್ನ ಬಿಗ್ ಸ್ಕ್ರೀನ್ ಮೇಲೆ ತರೋದಕ್ಕೆ ಪ್ಲಾನ್ ಮಾಡಿದ್ರು. ದುರ್ಯೋಧನ ಪಾತ್ರಕ್ಕೆ ದರ್ಶನ್ ನ ಕಾಸ್ಟ್ ಮಾಡಿಕೊಂಡ್ರು. ಬಹುಭಾಷಾ ನಟರುಗಳು, ತ್ರಿಡಿ ತಂತ್ರಜ್ಞಾನ.. ಆವತ್ತಿಗೆ ಅತ್ಯಂತ ದೊಡ್ಡ ಬಜೆಟ್ ಸಿನಿಮಾ ಆಗಿ ಮೂಡಿಬಂದಿತ್ತು ಕುರುಕ್ಷೇತ್ರ.
ಕುರುಕ್ಷೇತ್ರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಆದರೆ ಇದೀಗ ಕುರುಕ್ಷೇತ್ರದ ನಿರ್ಮಾಪಕ ಹಾಗೂ ನಟ ಇಬ್ಬರು ಕೂಡ ಜೈಲು ಸೇರಿದ್ದಾರೆ.
ಸಾಮಾನ್ಯವಾಗಿ ಕುರುಕ್ಷೇತ್ರ ನಾಟಕ ಮಾಡಿದ್ರೆ ಅದನ್ನ ಮಾಡಿದ ಕಲಾವಿದರಿಗೆ , ಆಯೋಜಕರಿಗೆ ತೊಂದರೆ ಆಗುತ್ತೆ ಅನ್ನೋ ಮಾತು ರಂಗಭೂಮಿಯಲ್ಲಿ ಇತ್ತು. ಇದೀಗ ಸಿನಿ ರಂಗದಲ್ಲೂ ಇದೇ ಮಾತು ಕೇಳಿ ಬರ್ತಾ ಇದೆ. ಮುನಿರತ್ನ ಮತ್ತು ದರ್ಶನ್ ಗೆ ಕುರುಕ್ಷೇತ್ರದ ಶಾಪವೇ ಅಂಟಿಕೊಂಡಿದೆ ಅನ್ನೋ ಮಾತುಗಳು ಕೇಳಿಬರ್ತಾ ಇವೆ. ಇದು ನಿಜವೋ ಇಲ್ಲವೋ ಗೊತ್ತಿಲ್ಲ.. ಒಟ್ನಲ್ಲಿ ಕಾಕತಾಳೀಯ ಅನ್ನುವಂತೆ ಈ ಕುರುಕ್ಷೇತ್ರ ಸಿನಿಮಾದ ನಟ, ನಿರ್ಮಾಪಕ ಜೈಲು ಸೇರಿದ್ದಾರೆ.