ಬೆಂಗಳೂರು: ಕೊಲೆ ಆರೋಪ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಸದ್ಯ ಬಂಧನಕ್ಕೆ ಒಳಗಾಗಿರುವ ದರ್ಶನ್ ಅವರನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಕೊಲೆಗೂ ಮೊದಲು ನಡೆದಿದ್ದು ಏನು..?
ಕೊಲೆಯಾದ ರೇಣುಕಾಸ್ವಾಮಿ ನಟಿ ಪವಿತ್ರಗೌಡಗೆ ಮೆಸೇಜ್ ಮಾಡುತ್ತಿದ್ದ ಎಂಬ ಆರೋಪ ಪ್ರಕರಣದಲ್ಲಿ ಕೇಳಿಬಂದಿದೆ. ಈ ಸಂಬಂಧ ಪವಿತ್ರ ಗೌಡ ಅವರು, ಅನೇಕ ಬಾರಿ ರೇಣುಕಾಸ್ವಾಮಿ ವಾರ್ನಿಂಗ್ ಕೂಡ ಮಾಡಲಾಗಿತ್ತು. ಕೊನೆಗೆ ಈ ವಿಚಾರ ದರ್ಶನ್ ಅವರ ಗಮನಕ್ಕೆ ಬಂದಿದೆ ಎಂದು ತಿಳಿದುಬಂದಿದೆ.
ಕೊನೆಗೆ ದರ್ಶನ್ ಅವರ ಆಪ್ತರು ಫೇಕ್ ಅಕೌಂಟ್ ಕ್ರಿಯೇಟ್ ಮಾಡಿದ್ದರು. ಈ ಮೂಲಕ ರೇಣುಕಾಸ್ವಾಮಿಯನ್ನು ದರ್ಶನ್ ಆಪ್ತರು ಸಂಪರ್ಕ ಮಾಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಮಾತುಕತೆ ನಡೆದ ಬಳಿಕ ಆತನನ್ನು ದರ್ಶನ್ ಬಳಿಗೆ ಎತ್ತಾಕೊಂಡು ಬರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಅಂತೆಯೇ ಜೂನ್ 7 ರಂದು ರೇಣುಕಾಸ್ವಾಮಿಯ ಕಿಡ್ನ್ಯಾಪ್ ಮಾಡಿದ್ದಾರಂತೆ. ಕಿಡ್ನ್ಯಾಪ್ ಮಾಡಿ ಆರ್ಆರ್ ನಗರ ಮನೆ ಬಳಿಯಿರುವ ಶೆಡ್ನಲ್ಲಿ ಕೂಡಿಹಾಕಿದ್ದಾರಂತೆ. ಆಗ ರೇಣುಕಾಸ್ವಾಮಿಗೆ ಮನಬಂದಂತೆ ದರ್ಶನ್ ಥಳಿಸಿದ್ದಾರೆ. ದರ್ಶನ್ ಕೊಟ್ಟ ಏಟಿಗೆ ರೇಣುಕಾಸ್ವಾಮಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಚಾರ ಗೊತ್ತಾಗುತ್ತಿದ್ದಂತೆಯೇ ಗಿರಿನಗರ ಹುಡುಗರಿಗೆ ಕರೆ ಮಾಡಿ ದರ್ಶನ್ ಕರೆಸಿಕೊಂಡಿದ್ದಾರೆ. ಕೊನೆಗೆ ರೇಣುಕಾಸ್ವಾಮಿ ಬಾಡಿಯನ್ನು ಕಾಮಾಕ್ಷಿಪಾಳ್ಯ ಮೋರಿಯಲ್ಲಿ ಹುಡುಗರು ಎಸೆದಿದ್ದಾರೆ ಎನ್ನಲಾಗಿದೆ.
ಕೊಲೆಯಾದ ಬೆನ್ನಲ್ಲೇ ದರ್ಶನ್ ಮೈಸೂರಿಗೆ ಪರಾರಿಯಾಗಿದ್ದಾರೆ. ವಿಚಾರ ದೊಡ್ಡದಾಗುತ್ತೆ ಅಂತ ಮೂರು ಜನರು ನಿನ್ನೆ ಪೊಲೀಸರಿಗೆ ಶರಣಾಗಿದ್ದಾರೆ. ನಾವೆ ಹಣಕಾಸಿನ ವಿಚಾರಕ್ಕೆ ಕೊಲೆ ಮಾಡಿದ್ವಿ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಪೊಲೀಸರು ತಮ್ಮದೇ ಬಾಷೆಯಲ್ಲಿ ಕೇಳಿದಾಗ ದರ್ಶನ್ ಹೆಸರು ಪ್ರಸ್ತಾಪ ಆಗಿದೆ ಎಂದು ತಿಳಿದುಬಂದಿದೆ.