ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಇಂದು ಹೈಕೋರ್ಟ್ನಲ್ಲಿ ನಡೆಯಲಿದೆ. ಮಧ್ಯಂತರ ಜಾಮೀನು ಪಡೆದ ಬಳಿಕ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಚಿಕಿತ್ಸೆಗಾಗಿ ಈಗಾಗಲೇ ಆರು ವಾರಗಳ ಕಾಲ ಮಧ್ಯಂತರ ಜಾಮೀನು ಪಡೆದಿರುವ ದರ್ಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದರ್ಶನ್ ಜಾಮೀನು ಅರ್ಜಿಗೆ ಎಸ್ಪಿಪಿ ಪ್ರಸನ್ನಕುಮಾರ್ ಅವರು ಆಕ್ಷೇಪಣೆ ಸಲ್ಲಿಸಿದ್ದಾರೆ. ದರ್ಶನ್ಗೆ ನೀಡುತ್ತಿರುವ ಚಿಕಿತ್ಸೆ ಕುರಿತು ವೈದ್ಯಕೀಯ ವರದಿ ಸಲ್ಲಿಸಲಾಗಿದೆ. ವೈದ್ಯರ ವರದಿ ಆಧಾರಿಸಿ ಎಸ್ಪಿಪಿ ಪ್ರತಿವಾದ ಮಂಡಿಸುವ ಸಾಧ್ಯತೆ ಇದ್ದು, ಚಿಕಿತ್ಸೆ ಹಾಗೂ ಆಪರೇಷನ್ ಸಂಬಂಧ ವೈದ್ಯರಿಂದ ವರದಿ ಸಲ್ಲಿಕೆಯಾಗಿದೆ.
ಇಂದು ದರ್ಶನ್ ಸೇರಿ ಒಟ್ಟು 6 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ದರ್ಶನ್, ಪವಿತ್ರಾಗೌಡ, ನಾಗರಾಜ್, ಅನುಕುಮಾರ್ ಲಕ್ಷ್ಮಣ ಹಾಗೂ ಜಗದೀಶ್ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಇಂದು ನಡೆಯಲಿದ್ದು. ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರ ಪೀಠದಲ್ಲಿ ವಿಚಾರಣೆ ನಡೆಯಲಿದೆ.
ನಟ ದರ್ಶನ್ ಪರ ಇಂದು ಹಿರಿಯ ವಕೀಲ ಸಿ.ವಿ.ನಾಗೇಶ್ ಹೈಕೋರ್ಟ್ಗೆ ಹಾಜರಾಗಲಿದ್ದಾರೆ. ಪೂರ್ಣ ಪ್ರಮಾಣದ ಜಾಮೀನಿಗಾಗಿ ದರ್ಶನ್ ಪರ ವಕೀಲರು ಪ್ರಯತ್ನ ನಡೆಸಲಿದ್ದಾರೆ.ಜಾಮೀನು ನೀಡದಂತೆ ತೀವ್ರ ಆಕ್ಷೇಪಣೆಗೆ ಮತ್ತೊಂದು ಕಡೆ ಎಸ್ಎಸ್ಪಿ ಪ್ರಸನ್ನಕುಮಾರ್ ನಿರ್ಧರಿಸಿದ್ದಾರೆ.