ನಟ ದರ್ಶನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕೊಲೆಯಾದ ಟೈಂ ನಲ್ಲಿ ದಾಸ ಪಟ್ಟಣಗೆರೆ ಶೆಡ್ ನಲ್ಲಿ ಇದ್ದ ಅನ್ನೋದಕ್ಕೆ ಪೂರಕವೆಂಬಂತೆ ಸಾಕ್ಷಿಗಳು ಸಿಕ್ಕಿವೆ. ಎಫ್ ಎಸ್ ಎಲ್ ರಿಪೋರ್ಟ್ ನಲ್ಲಿ ರಿಟ್ರೀವ್ ಆಗಿರುವ ಪೋಟೊ ಗಳೇ ಸಾರಿ ಸಾರಿ ಹೇಳ್ತಿವೆ.
ಇತ್ತ ಖಾಕಿ ಟೀಮ್ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿರುವ ಪೋಲೀಸರು ಇದಕ್ಕೆ ಪೂರಕವೆಂಬ ಗೃಹ ಸಚಿವರು ಕೂಡ ಸಾಥ್ ನೀಡಿದ್ದಾರೆ. ಇಂದು ಹೈಕೋರ್ಟ್ನಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಅಲ್ಲಿ ಈ ಎಲ್ಲಾ ವಿಚಾರಗಳು ಮತ್ತೊಮ್ಮೆ ಚರ್ಚೆಗೆ ಬರೋ ಸಾಧ್ಯತೆ ಇದೆ.
ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ನೇತೃತ್ವದ ಹೈಕೋರ್ಟ್ ಪೀಠದಲ್ಲಿ ದರ್ಶನ್, ಪವಿತ್ರಾಗೌಡ, ನಾಗರಾಜು ಆರ್., ಅನುಕುಮಾರ್, ಲಕ್ಷ್ಮಣ್ ಎಂ. ಹಾಗೂ ಜಗದೀಶ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಈ ವೇಳೆ ಯಾವ ರೀತಿಯ ವಾದ ವಿವಾದಗಳು ನಡೆಯುತ್ತವೆ ಎನ್ನುವ ಕುತೂಹಲ ಮೂಡಿದೆ.
ಅನಾರೋಗ್ಯ ಕಾರಣಕ್ಕೆ ದರ್ಶನ್ ಮಧ್ಯಂತರ ಜಾಮೀನು ಪಡೆದಿದ್ದಾರೆ. ಆದರೆ ಈವರೆಗೂ ಸರ್ಜರಿ ಮಾಡಿಸದೇ ಇರುವ ಬಗ್ಗೆ ಉತ್ತರಿಸಬೇಕಾದ ಅನಿವಾರ್ಯತೆ ಇದೆ. ಸೂಕ್ತ ವಿವರಣೆ ನೀಡದಿದ್ದರೆ ಮಧ್ಯಂತರ ಜಾಮೀನು ಹಿಂಪಡೆಯಲು ಕೋರ್ಟ್ಗೆ ಅವಕಾಶವಿದೆ.
ಆರೋಪಿಗಳೊಂದಿಗೆ ದರ್ಶನ್ ತೆಗೆಸಿಕೊಂಡಿದ್ದ ಫೋಟೋ ಪೊಲೀಸರಿಗೆ ಈಗ ಸಿಕ್ಕಿದೆ. ಇದು ಪ್ರಕರಣಕ್ಕೆ ಪ್ರಮುಖ ಸಾಕ್ಷಿ ಎನಿಸಿಕೊಂಡಿದೆ. ದರ್ಶನ್ ಈ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂಬುದಕ್ಕೆ ಈ ಫೋಟೋಗಳು ಸಾಕ್ಷಿ ನೀಡುವ ರೀತಿಯಲ್ಲಿ ಇದೆ. ಈ ವಿಚಾರವಾಗಿ ಪೊಲೀಸರು ಹೆಚ್ಚುವರಿ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ.
ಇದೆಲ್ಲವನ್ನೂ ಆಧರಿಸಿ ಸರ್ಕಾರಿ ಪರ ವಕೀಲ ಪ್ರಸನ್ನ ಕುಮಾರ್ ವಾದ ಮಂಡಿಸಲಿದ್ದಾರೆ. ಒಟ್ಟಾರೆ ಬೇಲ್ ಮೇಲೆ ಹೊರಗಡೆ ಬರಲು ನಟ ದರ್ಶನ್ ನ್ಯಾಯಾಲಯ ಕ್ಕೆ ಸುಳ್ಳು ವರದಿ ನೀಡಿದ್ರಾ..ಅನ್ನೋ ಅನುಮಾನ ಮೂಡುತ್ತಿದ್ದು.ಆದಷ್ಟು ಬೇಗ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಪೊಲೀಸ್ ಸಿದ್ದತೆ ಆಗಿದ್ದು .ಇದರಲ್ಲಿ ಯಾರಿಗೆ ಜಯ ಸಿಗುತ್ತೆ ಅಂತ ಕಾದು ನೋಡಬೇಕು