ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಕಳೆದ 13 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇಂದಿಗೆ ನ್ಯಾಯಾಂಗ ಬಂಧನ ಮುಗಿಯಲಿದ್ದು ದರ್ಶನ್ ಅವರನ್ನು ಮತ್ತೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುತ್ತಿದೆ.
ಇಂದು ದರ್ಶನ್ ನ್ಯಾಯಾಂಗ ಬಂಧನ ಕಂಪ್ಲೀಟ್ ಆಗಲಿದ್ದು ದರ್ಶನ್ ಪರ ವಕೀಲರು ಜಾಮೀನಿಗೆ ಅರ್ಜಿ ಹಾಕೋ ಸಾಧ್ಯತೆ ಹೆಚ್ಚಿದೆ.
ಒಂದು ವೇಳೆ ಇಂದು ದರ್ಶನ್ ಗೆ ಜಾಮೀನು ಸಿಗದಿದ್ದರೆ ಮತ್ತೆ ಜೈಲು ಪಾಲಾಗಲಿದ್ದಾರೆ. ದರ್ಶನ್ ಗೆ ಜೈಲಾ ಇಲ್ಲ ಬೇಲಾ ಅನ್ನೋದು ಇಂದು ನಿರ್ಧಾರವಾಗಲಿದೆ. ಈಗಾಗಲೇ ಅವರ ಅಭಿಮಾನಿಗಳು ಅವರಿಗೆ ಜೈಲು ಸಿಗಲಿ ಎಂದು ಪೂಜೆ, ಪ್ರಾರ್ಥನೆ ಮಾಡುತ್ತಿದ್ದಾರೆ.
ಕೊಲೆ ಆರೋಪದಲ್ಲಿ ದರ್ಶನ್ ಜೈಲು ಸೇರಿದಾಗಿನಿಂದ ಅವರ ಸಿನಿಮಾ ಮಾಡುತ್ತಿರುವ ನಿರ್ಮಾಪಕರು ಚಿಂತೆಯಲ್ಲಿದ್ದಾರೆ. ಕೆಲವು ಸಿನಿಮಾ ಅರ್ಧದಲ್ಲಿ ನಿಂತಿದ್ದರೆ ಇನ್ನೊಂದಷ್ಟು ನಿರ್ಮಾಪಕರು ನಟನಿಗೆ ಅಡ್ವಾನ್ಸ್ ಪೇ ಮಾಡಿದ್ದಾರೆ. ಇಂದರಿಂದ ನಿರ್ಮಾಪಕರು ಆದಷ್ಟು ಬೇಗ ದರ್ಶನ್ ಹೊರಗೆ ಬರಲಿ ಎಂದು ಅಂದುಕೊಳ್ಳುತ್ತಿದ್ದಾರೆ.
ಖ್ಯಾತ ನಿರ್ಮಾಪಕ ಕೆ ಮಂಜು ಸುದ್ದಿಗೋಷ್ಠಿ ನಡೆಸಿ ದರ್ಶನ್ ಬಗ್ಗೆ ಮಾತನಾಡಿದ್ದಾರೆ. ದರ್ಶನ್ ಪರ ಬ್ಯಾಟ್ ಬೀಸಿದ ಕೆ ಮಂಜು ಅವರು ದರ್ಶನ್ ಗಾಗಿ ಅಂದು ಲಂಕೇಶ್ ಪತ್ರಿಕೆ ನಿರ್ಮಿಸಿದ್ದೆ. ಅವತ್ತಿನ ದರ್ಶನ್ ಹೇಗೆ ಇದ್ದರೂ ಈಗಲೂ ಹಾಗೆಯೇ ಇದ್ದಾರೆ. ತುಂಬಾ ಬಡತನದಿಂದ ಬಂದ ಹುಡುಗ ಎಂದಿದ್ದಾರೆ.
ದರ್ಶನ್ ಅವರು ಜೈಲಿನಿಂದ ಹೊರ ಬಂದರೇ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯಾ ಒದಗಿಸುತ್ತೇವೆ ಎಂದಿದ್ದಾರೆ. ಅಲ್ಲದೆ ನ್ಯಾಯಾಲಯ ತೀರ್ಮಾನ ತೆಗೆದುಕೊಳ್ಳುತ್ತದೆ. ತಪ್ಪು ಎಲ್ಲರಿಂದ ಆಗುತ್ತದೆ ನಾವು ಕಣ್ಣಿಂದ ನೋಡಿದ್ದೇವೆ. ದರ್ಶನ್ ಒಳ್ಳೆಯವರು ಸ್ನೇಹ ಜೀವಿ ಕೆಲವರ ಜೊತೆ ಮನಸ್ತಾಪ ಇದೆ ಎಂದಿದ್ದಾರೆ.