ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಹಿನ್ನೆಲೆಯಲ್ಲಿ ದರ್ಶನ್ ರನ್ನು ಇನ್ನೂ ಕೆಲವೇ ಗಂಟೆಗಳಲ್ಲಿ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗುತ್ತಿದೆ. ದರ್ಶನ್ ಅವರು ಬಳ್ಳಾರಿಗೆ ಶಿಫ್ಟ್ ಆಗುತ್ತಿರುವುದರಿಂದ ಪತ್ನಿ ವಿಜಯಲಕ್ಷ್ಮೀಗೆ ಫುಲ್ ಟೆನ್ಷನ್ ಶುರುವಾಗಿದೆ. ಪತಿಯನ್ನು ನೋಡಬೇಕು ಎಂದರೆ ವಿಜಯಲಕ್ಷ್ಮಿ 300 ಕಿ.ಮೀ ಪ್ರಯಾಣ ಮಾಡಬೇಕಾಗಿದ್ದು ಪ್ರತಿವಾರ ಪ್ರಯಾಣ ಮಾಡೋದು ಕಷ್ಟ ಆಗಲಿದೆ.
ದರ್ಶನ್ ಅರೆಸ್ಟ್ ಆದಾಗಿನಿಂದ ದರ್ಶನ್ ಅವರನ್ನು ವಿಜಯಲಕ್ಷ್ಮೀ ಈವರೆಗೆ 8ಕ್ಕೂ ಹೆಚ್ಚುಬಾರಿ ಭೇಟಿ ಮಾಡಿ ಬಂದಿದ್ದಾರೆ. ಅವರ ಜೊತೆ ಮಗ ವಿನೀಶ್ ಕೂಡ ಇರುತ್ತಿದ್ದರು. ಇವರ ಜೊತೆ ಇತರ ಸೆಲೆಬ್ರಿಟಿಗಳು ಕೂಡ ಆಗಮಿಸಿದ್ದು ಇದೆ. ಈಗ ವಿಜಯಲಕ್ಷ್ಮೀ ಅವರು ದರ್ಶನ್ನ ಭೇಟಿ ಮಾಡಬೇಕು ಎಂದರೆ ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ತೆರಳಬೇಕು.
ದರ್ಶನ್ ಅವರು ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಜೊತೆ ಆಪ್ತತೆ ಬೆಳೆಸಿಕೊಂಡಿದ್ದರು. ಅವರಿಂದ ಸಾಕಷ್ಟು ಸವಲತ್ತುಗಳನ್ನು ದರ್ಶನ್ ಪಡೆದುಕೊಂಡಿದ್ದರು. ಇದು ಬೆಳಕಿಗೆ ಬಂದ ಬೆನ್ನಲ್ಲೇ ತನಿಖೆ ಆರಂಭ ಆಗಿದೆ. ದರ್ಶನ್ ಗ್ಯಾಂಗ್ನ ಒಡೆಯಲಾಗಿದೆ. ಇದು ದರ್ಶನ್ ಅವರನ್ನು ಮತ್ತಷ್ಟು ಕುಗ್ಗಿಸಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.
ಇನ್ನು, ದರ್ಶನ್ ಅವರು ಮನೆ ಊಟಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಈ ಅರ್ಜಿ ವಿಚಾರಣೆ ಕರ್ನಾಟಕ ಹೈಕೋರ್ಟ್ನಲ್ಲಿ ನಡೆಯುತ್ತಿದೆ. ಅವರು ಜೈಲಿನಲ್ಲಿ ಊಟವನ್ನು ಹೊರಗಿನಿಂದ ತರಿಸಿಕೊಳ್ಳುತ್ತಿದ್ದರು ಎನ್ನುವ ವಿಚಾರ ಬಯಲಾಗಿರುವುದರಿಂದ ಕೋರ್ಟ್ ಯಾವ ರೀತಿಯ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ದರ್ಶನ್ ಬಳ್ಳಾರಿ ಜೈಲಿಗೆ, ಪವನ್ , ರಾಘವೇಂದ್ರ, ನಂದೀಶ್ ಮೈಸೂರು ಜೈಲಿಗೆ, ಜಗದೀಶ್ ಶಿವಮೊಗ್ಗ ಜೈಲಿಗೆ, ಧನರಾಜ್ ಧಾರವಾಡ ಜೈಲಿಗೆ , ವಿಜಯಪುರ ಜೈಲಿಗೆ ವಿನಯ್ ಶಿಫ್ಟ್ ಮಾಡಲಿದ್ದಾರೆ. ನಾಗರಾಜ್ ಕಲಬುರಗಿ ಜೈಲು, ಲಕ್ಷ್ಮಣ ಶಿವಮೊಗ್ಗ ಜೈಲು, ಪ್ರದೂಶ್ ಬೆಳಗಾವಿ ಜೈಲಿಗೆ ಶಿಫ್ಟ್ ಮಾಡಲಿದ್ದಾರೆ.