ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ
ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ದರ್ಶನ್ ತಮ್ಮ ಸ್ನೇಹಿತರ ಜೊತೆ ಪ್ರಮುಖ ಯಾತ್ರಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ದರ್ಶನ್ ದೇವಸ್ಥಾನ್ಕಕೆ ಬರುತ್ತಿದ್ದಂತೆ ನೂರಾರು ಭಕ್ತರು ದರ್ಶನ್ ರನ್ನು ನೋಡಲು ಮುಗಿಬಿದ್ದಿರು.
ಈ ವೇಳೆ ಅಭಿಮಾನಿಗಳತ್ತ ಕೈ ಬೀಸಿದ ದರ್ಶನ್ ನಗುಮುಗದಿಂದಲೇ ಮಹದೇಶ್ವರನ ದರ್ಶನಕ್ಕೆ ತೆರಳಿದರು.
ದರ್ಶನ್ ದೇವಸ್ಥಾನಕ್ಕೆ ಬರುತ್ತಿರುವ ವಿಷಯ ತಿಳಿದ ಸುತ್ತ ಮುತ್ತಲಿನ ಗ್ರಾಮಸ್ಥರು ಚಾಲೆಂಜಿಂಗ್ ಸ್ಟಾರ್ ನೋಡಲು ದೇವಸ್ಥಾನಕ್ಕೆ ಆಗಮಿಸಿದರು.
ಈ ವೇಳೆ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು