ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಬಳ್ಳಾರಿ ಜೈಲು ಸೇರಿ 20 ದಿನ ಕಳೆದಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಅರಾಮಾಗಿದ್ದ ದರ್ಶನ್ ಗೆ ಬಳ್ಳಾರಿ ಜೈಲಿನ ವಾಸ ನಿತ್ಯ ನರಕವಾಗಿದೆ. ಈ ಮಧ್ಯೆ ದರ್ಶನ್ ರ ನ್ಯಾಯಾಂಗ ಬಂಧನದ ಅವಧಿ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ಈ ಬೆನಲ್ಲೇ ಪತ್ನಿ ವಿಜಯಲಕ್ಷ್ಮಿ, ನಟ ಧನ್ವೀರ್ ಜೈಲಿಗೆ ಭೇಟಿ ನೀಡಿ ಮಹತ್ವದ ಚರ್ಚೆ ನಡೆಸಿದ್ದಾರೆ. ಬಳ್ಳಾರಿ ಜೈಲಿನಲ್ಲಿರೋ ದರ್ಶನ್ ಕಂಡು ನಟ ಧನ್ವೀರ್ ಕಣ್ಣೀರು ಹಾಕಿದ್ದಾರೆ.
ಪವಿತ್ರಾ ಗೌಡಗೆ ಮೆಸೇಜ್ ಮಾಡಿದ್ದ ಎಂಬ ಕಾರಣಕ್ಕೆ ನಟ ದರ್ಶನ್ ರಿಯಲ್ ಲೈಫ್ ನಲ್ಲಿ ಹೀರೋಯಿಸಂ ತೋರಿಸೋಕೆ ಹೋಗಿದ್ದಾರೆ. ಪರಿಣಾಮ ಕಳೆದ ಮೂರುವರೆ ತಿಂಗಳಿನಿಂದ ಜೈಲಿನ ಕಂಬಿ ಎಣಿಸ್ತಿದ್ದಾರೆ. ಸದ್ಯಕಂತೂ ದರ್ಶನ್ ಗೆ ಬಿಡುಗಡೆ ಅನ್ನೋದು ಮರೀಚಿಕೆಯಾಗಿದೆ. ಈ ಮಧ್ಯೆ ಪತ್ನಿ, ಸ್ನೇಹಿತರು ಬಳ್ಳಾರಿ ಜೈಲಿಗೆ ಭೇಟಿ ನೀಡಿ ಧೈರ್ಯ ತುಂಬಿದ್ದಾರೆ. ಜೊತೆಗೆ ಸೆಂಟ್ರಲ್ ಜೈಲಲ್ಲಿ ಇದ್ರೂ ಕಿರಿಕ್ ಮಾಡಿಕೊಳ್ತಿದ್ದ ಕಾಟೇರನಿಗೆ ಕೆಲವೊಂದಿಷ್ಟು ಬುದ್ಧಿ ಮಾತು ಹೇಳಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ 17 ಆರೋಪಿಗಳನ್ನ ಮತ್ತೆ 14 ದಿನ ನ್ಯಾಯಾಂಗ ಬಂಧನ ನೀಡಿ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.
ಸೆಪ್ಟೆಂಬರ್ 30ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶಿಸಿದೆ. ಇದೇ ಹೊತ್ತಲ್ಲಿ ದರ್ಶನ್ ಭೇಟಿಗೆ ಪತ್ನಿ ವಿಜಯಲಕ್ಷ್ಮೀ ಬಳ್ಳಾರಿ ಜೈಲಿಗೆ ಭೇಟಿ ನೀಡಿದ್ರು. ದಾಸನ ಆಪ್ತ, ನಟ ಧನ್ವೀರ್ ಕೂಡಾ ಜೊತೆಯಾಗಿದ್ರು. ಜೊತೆಗೆ ಬೇಲ್ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ರು. ಸತತ ನಾಲ್ಕನೇ ಬಾರಿಗೆ ಬಳ್ಳಾರಿ ಜೈಲಿಗೆ ದರ್ಶನ್ನನ್ನು ಕಾಣಲು ಪತ್ನಿ ವಿಜಯಲಕ್ಷ್ಮೀ ಭೇಟಿಯಾಗಿ ಮಾತುಕತೆ ನಡೆಸಿದ್ರು. ದರ್ಶನ್ಗಾಗಿ ಡ್ರೈಫ್ರೂಟ್ಸ್, ಸಂತೂರ್ ಸೋಪ್ನ ತಂದಿದ್ರು. ಇದೇ ವೇಳೆ ವಿಜಯಲಕ್ಷ್ಮಿ ಜೊತೆ 25 ನಿಮಿಷ ಕಾಲ ದರ್ಶನ್ ಚರ್ಚೆ ನಡೆಸಿದ್ದಾರೆ.
ಇದೇ ವೇಳೆ ಜಾಮೀನು ಅರ್ಜಿಗೆ ಸಹಿ ಹಾಕಿಸಿಕೊಂಡಿರುವ ಬಗ್ಗೆ ಮಾಹಿತಿ ಇದೆ. ಸದ್ಯ ಹೈ ಸೆಕ್ಯೂರಿಟಿ ಸೆಲ್ನಲ್ಲಿ ದರ್ಶನ್ ಬಂಧಿಯಾಗಿದ್ದು, ಬೇರೆ ಜೈಲಿಗೆ ಶಿಫ್ಟ್ ಮಾಡುವ ಬಗ್ಗೆಯೂ ವಿಜಯಲಕ್ಷ್ಮೀ ಚರ್ಚೆ ನಡೆಸಿದ್ದಾರಂತೆ. ಅಲ್ಲದೇ ಕಾನೂನು ಹೋರಾಟದ ಬಗ್ಗೆ ಪತ್ನಿ ಜೊತೆ ದರ್ಶನ್ ಮಾತುಕತೆ ನಡೆಸಿದ್ದಾರೆ ಅಂತ ತಿಳಿದುಬಂದಿದೆ. ವಿಜಯಲಕ್ಷ್ಮೀ ಭೇಟಿಗೆ ಬಂದ ದರ್ಶನ್, ಬಳ್ಳಾರಿ ಜೈಲಲ್ಲಿ ಸಂಪೂರ್ಣ ಸೊರಗಿದಂತೆ ಕಂಡುಬಂತು. ದರ್ಶನ್ ತೂಕದಲ್ಲಿ ಇಳಿಕೆಯಾಗಿದ್ದು, ಜಿಮ್ ಬಾಡಿ ಕರಗಿ ಹೋದಂತಿತ್ತು. ಅಲ್ಲದೇ ಬಿಳಿಗಡ್ಡದ ಜೊತೆಗೆ ಮುಖದಲ್ಲಿದ್ದ ಇರೋ ಕಳೆ ಕಮರಿ ಹೋಗಿತ್ತು. ಇನ್ನೂ ದರ್ಶನ್ ಭೇಟಿಗೆ ಹೋಗಿದ್ದ ಧನ್ವೀರ್ ತಮ್ಮ ಬಾಸ್ನ ನೋಡ್ತಿದ್ದಂತೆ ಕಣ್ಣೀರು ಹಾಕಿದ್ದಾರೆ.