ನಟ ಧ್ರುವ ಸರ್ಜಾ ತಮ್ಮ ಸಿನಿಮಾದ ಕೆಲಸದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಈ ಮಧ್ಯೆಯೇ ಬಿಡುವು ಮಾಡಿಕೊಂಡು ‘ಭುವನಂ ಗಗನಂ’ ಚಿತ್ರದ ಟ್ರೈಲರ್ ರಿಲೀಸ್ ಮಾಡುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಈ ವೇಳೆ, ಅಭಿಮಾನಿಗಳಿಗೆ ಧ್ರುವ ಸರ್ಜಾ ಮನವಿವೊಂದನ್ನು ಮಾಡಿದ್ದಾರೆ.
ಪ್ರಮೋದ್, ಪೃಥ್ವಿ ಅಂಬರ್ ನಟನೆಯ ‘ಭುವನಂ ಗಗನಂ’ ಚಿತ್ರದ ಟೀಸರ್ ಲಾಂಚ್ ಇವೆಂಟ್ಗೆ ಧ್ರುವ, ಸರ್ಜಾ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಧ್ರುವ ಸರ್ಜಾ, ನಾನು ಅವರ ಫ್ಯಾನು, ಇವರ ಫ್ಯಾನು ಎನ್ನಬೇಡಿ. ಪ್ರತಿ ಸಿನಿಮಾಗೂ ಪ್ರೀತಿ ತೋರಿಸಿ ಎಂದು ಮನವಿ ಮಾಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಫ್ಯಾನ್ಸ್ ವಾರ್ ಇತ್ತೀಚೆಗೆ ತುಸು ಹೆಚ್ಚಾಗಿದೆ. ಸ್ಟಾರ್ ನಟರ ಅಭಿಮಾನಿಗಳು ಇನ್ನೊಬ್ಬ ನಟನನ್ನು ಸಾಮಾಜಿಕ ಜಾಲತಾಣದಲ್ಲಿ ಹೀಯಾಳಿಸುವುದು, ಇನ್ನೊಬ್ಬ ನಟನ ಅಭಿಮಾನಿಗಳೊಟ್ಟಿಗೆ ಜಗಳ ಮಾಡುವುದು ಸಾಮಾನ್ಯ ಎಂಬಂತಾಗಿದೆ. ಇದಕ್ಕಿಂತಲೂ ಮುಂದೆ ಹೋಗಿ, ಇತರೆ ನಟನ ಸಿನಿಮಾವನ್ನೇ ತುಳಿಯುವ ಪ್ರಯತ್ನಗಳೂ ನಡೆದಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಾವೆಲ್ಲರೂ ಒಂದೇ ಎಂದಿದ್ದಾರೆ. ಯಾರ ಫ್ಯಾನ್ ಆದರೂ ಆಗಿರಿ ಆದರೆ ಕನ್ನಡ ಸಿನಿಮಾಗಳನ್ನು ತಪ್ಪದೇ ನೋಡಿರಿ ಎಂದು ಮನವಿ ಮಾಡಿದ್ದಾರೆ. ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ ಬೆಂಬಲಿಸಿ ಎಂದು ಧ್ರುವ ಸರ್ಜಾ ಹೇಳಿದ್ದಾರೆ.