ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟ ಡಾಲಿ ಧನಂಜಯ ಅಜ್ಜಿ ಮಲ್ಲಮ್ಮ ಅವರು 95ನೇ ವಯಸ್ಸಿಗೆ ಹಾಸನ ಜಿಲ್ಲೆಯ ಅರಸಿಕೆರೆಯ ಕಾಳೇನಹಳ್ಳಿಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅಜ್ಜಿ ಮಲ್ಲಮ್ಮಗೆ 5 ಜನ ಮಕ್ಕಳಿದ್ದರು. ಅದರಲ್ಲಿ ಡಾಲಿ ಅವರ ತಂದೆ ಅಡವಿಸ್ವಾಮಿ ಎರಡನೇಯವರಾಗಿದ್ದಾರೆ.
ಇದೀಗ ವಯೋಸಹಜ ಕಾಯಿಲೆಯಿಂದ ಮಲ್ಲಮ್ಮ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅಂದಹಾಗೆ, ಅಜ್ಜಿ ಜೊತೆ ಡಾಲಿ ಅಟ್ಯಾಚ್ ಆಗಿದ್ದರು. ಊರಿಗೆ ಹೋದಾಗ ಹೆಚ್ಚಿನ ಸಮಯ ಅಜ್ಜಿ ಜೊತೆಗೂ ಕಳೆಯುತ್ತಿದ್ದರು. ಇನ್ನೂ ‘ವೀಕೆಂಡ್ ವಿತ್ ರಮೇಶ್ ಸೀಸನ್ 5’ರಲ್ಲಿ ಮಲ್ಲಮ್ಮ ಕೂಡ ಬಂದಿದ್ದರು. ಆಗ ಮೊಮ್ಮಗ ಡಾಲಿಯ ಮದುವೆ ಬಗ್ಗೆ ಮಾತನಾಡಿದ್ದರು.