ಸ್ಯಾಂಡಲ್ವುಡ್ ಬ್ಲ್ಯಾಕ್ ಕೋಬ್ರಾ ನಟ ದುನಿಯಾ ವಿಜಯ್ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಸಿಎಂ ಭೇಟಿಯಾದ ನಟ ದುನಿಯಾ ವಿಜಯ್ ತಮ್ಮ ಮುಂದಿನ ಸಿನಿಮಾ ಭೀಮನನ್ನು ನೋಡಲು ಆಹ್ವಾನಿಸಿದ್ದಾರೆ.
ಇಂದು ಸಿಎಂ ನಿವಾಸ ಕಾವೇರಿಯಲ್ಲ ಭೇಟಿಯಾದ ದುನಿಯಾ ವಿಜಯ್ ತಾವೇ ನಿರ್ದೇಶಿಸಿ, ನಟಿಸಿರುವ ಭೀಮ ಸಿನಿಮಾವನ್ನು ನೋಡಲು ಆಹ್ವಾನಿಸಿದ್ದಾರೆ ಆಗಸ್ಟ್ 9 ಕ್ಕೆ ಭೀಮ ಮೂವಿ ರಾಜ್ಯಾದ್ಯಂತ ರಿಲೀಸ್ ಆಗಲಿದೆ. ರಿಲೀಸ್ ಗೂ ಮೊದಲೇ ಭೀಮ ಚಿತ್ರ ನೋಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಭೀಮ ಚಿತ್ರದ ಬಗ್ಗೆ ದೊಡ್ಡ ಮಟ್ಟದ ಕ್ರೇಕ್ ಕ್ರಿಯೇಟ್ ಆಗಿದೆ. ಕರ್ನಾಟಕದ ಬಹುತೇಕ ಏರಿಯಾಗಳು ಸೋಲ್ಡ್ ಔಟ್ ಆಗಿದ್ದು, ತೆಲುಗು ಭಾಷೆಯಲ್ಲೂ ಭೀಮನಿಗೆ ಭರ್ಜರಿ ಡಿಮ್ಯಾಂಡ್ ಇದೆ. ಈ ಹಿಂದೆ ಬಾಲಯ್ಯ ಅಭಿನಯದ ಚಿತ್ರದಲ್ಲಿ ದುನಿಯಾ ವಿಜಯ್ ವಿಲನ್ ರೋಲ್ ಮಾಡಿದ್ದರು. ಅದು ಅಲ್ಲಿಯ ಜನರಿಗೆ ಇಷ್ಟ ಆಗಿದೆ. ಹಾಗಾಗಿಯೇ ಇದೀಗ ಟಾಲಿವುಡ್ನಲ್ಲೂ ದುನಿಯಾ ವಿಜಯ್ ಚಿತ್ರಕ್ಕೆ ಬೇಡಿಕೆ ಇದ
ಕರ್ನಾಟಕದಲ್ಲಿ ಭೀಮ ಸಿನಿಮಾ 400 ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರದ ರಿಲೀಸ್ ಗಾಗಿಯೇ ಕ್ಲೋಸ್ ಆಗಿರೋ 18 ಥಿಯೇಟರ್ಗಳು ರೀ-ಓಪನ್ ಆಗುತ್ತಿದೆ. ಹಾಗಾಗಿಯೇ ಆಗಸ್ಟ್-9 ರಂದು ಭೀಮ ಅಬ್ಬರ ಬಲು ಜೋರಾಗಿಯೇ ಇರಲಿದೆ.