ಇಂದು ಮುಂಜಾನೆ ನಟ ಗೋವಿಂದ್ ಅವರ ಕಾಲಿಗೆ ಅವರದ್ದೆ ಗನ್ ನಿಂದ ಫೈರ್ ಆಗಿದೆ. ಗೋವಿಂದ್ ಪರವಾನಿಗೆ ಹೊಂದಿರುವ ಗನ್ ನಿಂದ ಮಿಸ್ ಫೈಯರ್ ಆಗಿದೆ. ಅವರನ್ನು ಮುಂಬೈನ ಅಂಧೇರಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಘಟನೆ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯದ ಬಗ್ಗೆ ಇದ್ದ ಆಂತಕ ದೂರ ಆಗಿದೆ.
‘ನಿಮ್ಮ ಆಶೀರ್ವಾದ, ತಂದೆ ತಾಯಿ ಆಶೀರ್ವಾದ, ದೇವರ ಆಶೀರ್ವಾದದಿಂದ ಆರೋಗ್ಯವಾಗಿದ್ದೇನೆ. ಬೆಳಿಗ್ಗೆ ಗುಂಡು ಬಿದ್ದಿತ್ತು. ಅದನ್ನು ತೆಗೆಯಲಾಗಿದೆ. ಆಸ್ಪತ್ರೆಯ ವೈದ್ಯರಿಗೆ ಧನ್ಯವಾದ ಹೇಳುತ್ತೇನೆ. ನಿಮ್ಮ ಪ್ರಾರ್ಥನೆಗಾಗಿ ಧನ್ಯವಾದ’ ಎಂದಿದ್ದಾರೆ ನಟ ಗೋವಿಂದ.
ಗೋವಿಂದ ಅವರು ಇಂದು ಕೋಲ್ಕತ್ತ ತೆರಳುವವರಿದ್ದರು. ಮುಂಜಾನೆ 5 ಗಂಟೆ ಸುಮಾರಿಗೆ ಅವರು ರೆಡಿ ಆಗುವಾಗ ಕೈಯಲ್ಲಿದ್ದ ಗನ್ ಕೈ ಜಾರಿದೆ. ಆಗ ಆಕಸ್ಮಿಕವಾಗಿ ಬುಲೆಟ್ ಫೈಯರ್ ಆಗಿದೆ. ಇದರಿಂದ ಅವರ ಕಾಲಿಗೆ ಬುಲೆಟ್ ತಾಗಿದೆ. ಬುಲೆಟ್ ಶಬ್ದ ವರದಿ ಆದ ಬೆನ್ನಲ್ಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಕೇಸ್ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಗೋವಿಂದ ಅವರನ್ನು ಮುಂಜಾನೆಯೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರು ಬೇಗ ಚೇತರಿಕೆ ಕಾಣಲಿ ಎಂದು ಫ್ಯಾನ್ಸ್ ಪ್ರಾರ್ಥನೆ ಮಾಡುತ್ತಿದ್ದಾರೆ. ಅವರ ಪ್ರಾಣಕ್ಕೆ ಯಾವುದೇ ತೊಂದರೆ ಇಲ್ಲ ಎನ್ನುವ ವಿಚಾರ ತಿಳಿದು ಅಭಿಮಾನಿಗಳು ನಿರಾಳರಾಗಿದ್ದಾರೆ.