ಕಳೆದ ವರ್ಷ ಪತ್ನಿಯಿಂದ ಡಿವೋರ್ಸ್ ಪಡೆದುಕೊಳ್ಳುವ ಮೂಲಕ ಸಖತ್ ಸುದ್ದಿಯಾಗಿದ್ದ ತಮಿಳಿನ ಖ್ಯಾತ ನಟ ಜಯಂ ರವಿ ಇದೀಗ ಮತ್ತೊಂದು ಶಾಕಿಂಗ್ ನಿರ್ಧಾರ ಕೈಗೊಂಡಿದ್ದಾರೆ. ದಿಢೀರ್ ಅಂತ ತನ್ನ ಹೆಸರನ್ನು ಬದಲಾಯಿಸಿಕೊಂಡಿರುವುದಾಗಿ ಜಯಂ ರವಿ ಹೇಳೀದ್ದು ಇನ್ಮುಂದೆ ನನ್ನನ್ನು ಜಯಂ ರವಿ ಅಂತ ಕರೀಬೇಡಿ ನನ್ನ ನಿಜವಾದ ಹೆಸರು ರವಿ ಮೋಹನ್ ಎಂದಿದ್ದಾರೆ.
ನಟ ರವಿ ಪ್ರಸಿದ್ಧ ಚಲನಚಿತ್ರ ಸಂಪಾದಕ ಎ ಮೋಹನ್ ಅವರ ಮಗ. ಜಯಂ ಚಿತ್ರದ ತಮಿಳು ರಿಮೇಕ್ನಲ್ಲಿ ಮೊದಲ ಬಾರಿಗೆ ನಟಿಸಿದ್ದು ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆ ಬಳಿಕ ರವಿ ಜಯಂ ರವಿ ಎಂದೇ ಖ್ಯಾತಿಯಾದರು. ಆದರೆ ಇದೀಗ ರವಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದು ರವಿ ಮೋಹನ್ ಆಗಿದ್ದಾರೆ.
ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪತ್ರಿಕಾ ಪ್ರಕಟನೆಯನ್ನು ರವಿ ಶೇರ್ ಮಾಡಿದ್ದಾರೆ. ಇನ್ಮುಂದೆ ನನ್ನನ್ನು ಜಯಂ ರವಿ ಎಂಬ ಹೆಸರಿನಿಂದ ಕರೆಯಬೇಡಿ ಎಂದು ಮನವಿ ಮಾಡಿದ್ದಾರೆ. ರವಿ ಮೋಹನ್ ಎಂದೇ ಬಳಸುವಂತೆ ಕೋರಿಕೊಂಡಿದ್ದಾರೆ. ಹೊಸ ವರ್ಷದಲ್ಲಿ ಹೊಸ ದೃಷ್ಟಿಕೋನ ಮತ್ತು ಹೊಸ ಮೌಲ್ಯಗಳೊಂದಿಗೆ ಮುನ್ನಡೆಯಲು ನಿರ್ಧರಿಸಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.
ರವಿ ಮೋಹನ್ ಸ್ಟುಡಿಯೋ ಸ್ಥಾಪಿಸಿ ಹೊಸ ಕಥೆಗಳನ್ನು ಸಿನಿಮಾ ರೂಪದಲ್ಲಿ ನಿಮ್ಮ ಮುಂದಿಡುತ್ತೇನೆ ಎಂದು ನಟ ರವಿ ತಿಳಿಸಿದ್ದಾರೆ. ಮೇಲಾಗಿ ರವಿಮೋಹನ್ ಸ್ಟುಡಿಯೋಸ್ ಹೆಸರಿನ ನಿರ್ಮಾಣ ಸಂಸ್ಥೆಯನ್ನು ಆರಂಭಿಸುತ್ತಿರುವುದಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ, ಅಭಿಮಾನಿಗಳ ಸಂಘಗಳ ಹೆಸರನ್ನು ರವಿಮೋಹನ್ ಫ್ಯಾನ್ಸ್ ಫೌಂಡೇಶನ್ ಎಂದು ಬದಲಾಯಿಸಲಾಗಿದೆ ರವಿ ಹೇಳಿದ್ದರು.