ಸ್ಟಾರ್ ನಟ, ನಟಿಯರು ಕೆಲವೇ ಕೆಲವು ದೃಶ್ಯಗಳಲ್ಲಿ ನಟಿಸಲು ಕೋಟಿ ಕೋಟಿ ಸಂಭಾವನೆ ಪಡೆದುಕೊಳ್ಳುವುದು ಹೊಸದೇನು ಅಲ್ಲ. ಕಳೆದ ನಾಲ್ಕೈದು ದಿನಗಳ ಹಿಂದಷ್ಟೇ ನಟಿ ಊರ್ವಶಿ ರೌಟೇಲಾ ಕೇವಲ ಮೂರು ನಿಮಿಷ ನಟಿಸಲು 3 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದರು ಎಂದು ಸುದ್ದಿಯಾಗಿತ್ತು. ಇದೀಗ ಮಾಲಿವುಡ್ನ ಎವರ್ಗ್ರೀನ್ ಹೀರೋ ಮಮ್ಮುಟ್ಟಿ ಕೇವಲ ಎರಡೇ 2 ದೃಶ್ಯದಲ್ಲಿ ನಟಿಸಲು ದುಬಾರಿ ಸಂಭಾವನೆಯನ್ನು ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿಗೆ 71 ವರ್ಷವಾಗಿದ್ರು ಇಂದಿಗೂ ಅದೆ ಎಜರ್ನಿ ಉಳಿಸಿಕೊಂಡಿದ್ದಾರೆ. ಚಿರ ಯುವಕರನ್ನು ನಾಚಿಸುವಂತೆ ಸ್ಟಂಟ್ ಮಾಡಿ ಮಲಯಾಳಂ ಚಿತ್ರರಂಗದ ಸೂಪರ್ ಡ್ಯೂಪರ್ ಸ್ಟಾರ್ ಎನಿಸಿಕೊಂಡಿದ್ದಾರೆ. ಇಂದಿಗೂ ಸಾಲು ಸಾಲು ಸಿನಿಮಾಗಳಲ್ಲಿ ಮಮ್ಮುಟ್ಟಿ ಬ್ಯುಸಿಯಾಗಿದ್ದು, ಇದೀಗ ಹೊಸ ಸಿನಿಮಾವೊಂದಕ್ಕೆ ನಟಿಸಲು ನಟನ ಸಂಭಾವನೆ ವಿಚಾರವೊಂದು ಮಾಲಿವುಡ್ನಲ್ಲಿ ಸದ್ದು ಮಾಡುತ್ತಿದೆ.
ಇದೀಗ ಮತ್ತೆ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಆ ಹಿನ್ನೆಲೆಯಲ್ಲಿ ನಿರ್ದೇಶಕ ಮಹಿ ವಿ ರಾಘವ್ ಯಾತ್ರಾ 2 ಸಿನಿಮಾ ಶುರು ಮಾಡಿದ್ದಾರೆ. ವೈಎಸ್ಆರ್ ನಿಧನದ ನಂತರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ರಾಜಕೀಯ ಪಯಣ ಮತ್ತು ಅಧಿಕಾರಕ್ಕೆ ಬರಲು ಕಾರಣವಾದ ಪಾದಯಾತ್ರೆಯ ಹಿನ್ನೆಲೆಯಲ್ಲಿ ಈ ಸಿನಿಮಾವನ್ನು ತಯಾರಿಸಲಾಗುತ್ತಿದೆ. ಜಗನ್ ಪಾತ್ರದಲ್ಲಿ ತಮಿಳು ನಟ ಜೀವ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಯಾತ್ರಾ ಬಯೋಪಿಕ್ ಸಿನಿಮಾದ ಮುಂದುವರಿದ ಭಾಗದಂತಿರುವ ಯಾತ್ರಾ 2 ಸಿನಿಮಾದಲ್ಲಿ ವೈಎಸ್ಆರ್ಗೆ ಸಂಬಂಧಿಸಿದ ದೃಶ್ಯಗಳೂ ಇವೆ. ಹಾಗಾಗಿ, ಯಾತ್ರಾದಲ್ಲಿ ವೈಎಸ್ಆರ್ ಪಾತ್ರ ಮಾಡಿದ್ದ ಮಮ್ಮುಟ್ಟಿ ಇಲ್ಲಿಯೂ ನಟಿಸಬೇಕಿದೆ. ಆದರೆ ಅದಕ್ಕಾಗಿ ಅವರು ಕೇಳಿರುವ ಸಂಭಾವನೆ ಮಾತ್ರ ಎಲ್ಲರಿಗೂ ಶಾಕ್ ಆಗಿದೆ.
ವೈಎಸ್ಆರ್ ಪಾತ್ರದಲ್ಲಿ ನಟಿಸಲು ಚಿತ್ರತಂಡ ಮಮ್ಮುಟ್ಟಿಗೆ ಆಫರ್ ನೀಡಿದೆ. ಸಿನಿಮಾದಲ್ಲಿ ಕೇವಲ ಎರಡೇ ಎರಡು ದೃಶ್ಯಕ್ಕೆ ನಟ 10 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನೇ ಕೇಳಿದ್ದಾರೆ ಎನ್ನಲಾಗುತ್ತಿದ್ದು, ಮಮ್ಮುಟ್ಟಿ ಕೇಳಿದ ಸಂಭಾವನೆ ಕೇಳಿ ನಿರ್ಮಾಪಕರು ಶಾಕ್ ಆಗಿದ್ದಾರಂತೆ. ಸಂಭಾವನೆ ಕೊಂಚ ಕಮ್ಮಿ ಮಾಡಿಕೊಳ್ಳುವಂತೆ ಮಮ್ಮುಟ್ಟಿಗೆ ಚಿತ್ರತಂಡ ಮನವಿ ಮಾಡಿದೆಯಂತೆ.