ನವದೆಹಲಿ: ಬಹುಭಾಷೆಗಳಲ್ಲಿ ಬ್ಲಾಕ್ ಬ್ಲಸ್ಟರ್ ಹಿಟ್ ಎನಿಸಿದ್ದ ಮಲಯಾಳಂನ ʼದೃಶ್ಯಂʼ ಸಿನಿಮಾ ಇಂದಿಗೂ ಪ್ರೇಕ್ಷಕರ ಮನಸ್ಸಲ್ಲಿ ಅಚ್ಚಳಿದಿದೆ. ದೃಶ್ಯಂ ಭಾಗ ೧ ಹಾಗೂ ಎರಡು ಸೂಪರ್ ಹಿಟ್ ಆಗಿದ್ದು ಇದೀಗ ದೃಶ್ಯಂ ೩ ಬರೋದು ಕನ್ಪಾರ್ಮ್ ಆಗಿದೆ. ಈ ಗುಡ್ ನ್ಯೂಸ್ ಅನ್ನು ಸ್ವತಃ ನಟ ಮೋಹನ್ ಲಾಲ್ ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ಕ್ರೈಂ ಥ್ರಿಲ್ಲರ್ ʼದೃಶ್ಯಂʼ ಸಿನಿಮಾದ 2 ಭಾಗಗಳು ತೆರೆ ಕಂಡಿದೆ. ಆಕಸ್ಮಿಕವಾಗಿ ನಡೆಯುವ ಕೊಲೆ, ಅದರ ತನಿಖೆ, ಮುಂದೇನು ನಡೆಯುತ್ತದೆ ಎಂಬ ಕುತೂಹಲ ಕೊನೆ ತನಕವು ಉಳಿಸುವಲ್ಲಿ ನಿರ್ದೇಶಕ ಜೀತು ಜೋಸೆಫ್ ಯಶಸ್ವಿಯಾಗಿದ್ದಾರೆ. ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಹಾಗೂ ಖ್ಯಾತ ನಿರ್ದೇಶಕ ಜೀತು ಜೋಸೆಫ್ ಬ್ಲಾಕ್ಬಸ್ಟರ್ ಕ್ರೈಮ್ ಥ್ರಿಲ್ಲರ್ ಸಿನಿಮಾದ 3ನೇ ಭಾಗಕ್ಕೆ ಕೈಜೋಡಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ನಿರ್ದೇಶಕ ಜೀತು ಜೋಸೆಫ್ ಮತ್ತು ನಿರ್ಮಾಪಕ ಆಂಥೋನಿ ಪೆರುಂಬವೂರ್ ಅವರೊಂದಿಗೆ ಫೋಟೋ ಹಂಚಿಕೊಳ್ಳುವ ಮೂಲಕ ಮೋಹನ್ ಲಾಲ್ ತಮ್ಮ ಸಿನಿಮಾವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಈ ಫೋಟೋವನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ನಟ ಮೋಹನ್ ಲಾಲ್, ʻಪಾಸ್ಟ್ ಎಂದಿಗೂ ಮೌನವಾಗಿರುವುದಿಲ್ಲ. ದೃಶ್ಯಂ 3 ಕನ್ಫರ್ಮ್ʼ ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ. ಪೋಸ್ಟ್ ಹಂಚಿಕೊಂಡ ಕೂಡಲೇ ಅಭಿಮಾನಿಗಳು ಕಾಮೆಂಟ್ಗಳ ವಿಭಾಗದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಶುರು ಮಾಡಿದ್ದಾರೆ. ʻವಾಹ್, ಬಿಗ್ಗೆಸ್ಟ್ ಬ್ರ್ಯಾಂಡ್ ಸೀಕ್ವೆಲ್ ಈಸ್ ಬ್ಯಾಕ್ (ಫೈಯರ್ ಎಮೋಜಿಯೊಂದಿಗೆ)ʼ ಎಂದು ಬರೆದುಕೊಂಡಿದ್ದಾರೆ.
ʼದೃಶ್ಯಂʼ ಭಾಗ 1 ಮತ್ತು 2ರಲ್ಲಿ ಜಾರ್ಜ್ ಕುಟ್ಟಿ ಪಾತ್ರದಲ್ಲಿ ಮೋಹನ್ ಲಾಲ್ ನಟಿಸಿ ಸೈ ಎನಿಸಿದ್ದರು. ನಟಿ ಮೀನಾ, ಆಶಾ ಶರತ್, ಅಂಜಲಿ ನಾಯರ್ ಸೇರಿದಂತೆ ಅನೇಕ ತಾರಾಗಣ ಈ ಸಿರೀಸ್ ಸಿನಿಮಾದಲ್ಲಿ ಮೋಡಿ ಮಅಡಿತ್ತು. ಹಾಗಾಗಿ ಭಾಗ ಮೂರರಲ್ಲಿಯೂ ಅದೇ ತಾರಾಗಣ ಸಂಗಮವಾಗುತ್ತಾ ಅಥವಾ ಯಾರೆಲ್ಲ ಹೊಸ ನಟ ನಟಿಯರು ಅಭಿನಯಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.
