ಬಾಲಿವುಡ್ ಸ್ಟಾರ್ ನಟ ರಣ್ ಬೀರ್ ಕಪೂರ್ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡ್ತಿದ್ದಾರೆ. ‘ಬ್ರಹ್ಮಾಸ್ತ್ರ’, ‘ಅನಿಮಲ್’ ಸಿನಿಮಾಗಳ ಬಳಿಕ ರಣ್ ಬೀರ್ ಸಖತ್ ಬ್ಯುಸಿಯಾಗಿದ್ದಾರೆ. ಸದ್ಯ ‘ರಾಮಾಯಣ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟ ಸಂಜಯ್ ಲೀಲಾ ಬನ್ಸಾಲಿಯ ಸಿನಿಮಾದಲ್ಲಿಯೂ ನಟಿಸಲಿದ್ದಾರೆ. ಭಾರತದ ಸೂಪರ್ ಸ್ಟಾರ್ಗಳ ಪಟ್ಟಿಗೆ ಸೇರ್ಪಡೆ ಆಗಿರುವ ನಟ ರಣ್ಬೀರ್ ಕಪೂರ್ ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ತಮ್ಮ ತಂದೆ, ಖ್ಯಾತ ನಟ ರಿಷಿ ಕಪೂರ್ ನಿಧನ ಹೊಂದಿದಾಗ ತಾವು ಒಂದು ಹನಿ ಕಣ್ಣೀರು ಸಹ ಹಾಕಲಿಲ್ಲ ಎಂದಿದ್ದಾರೆ.
ಝಿರೋಧಾ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ನಟ ರಣ್ಬೀರ್ ಕಪೂರ್, ‘ನನ್ನ ತಂದೆ ಸತ್ತಾಗ ನನಗೆ ಒಂದು ರೀತಿಯ ಪ್ಯಾನಿಕ್ ಅಟ್ಯಾಕ್ ಆಗಿಬಿಟ್ಟಿತು. ನನಗೆ ನೆನಪಿದೆ. ವೈದ್ಯರು ಮಾಹಿತಿ ತಿಳಿಸಿದಾಗ ನನಗೆ ಏನು ಮಾಡಬೇಕು ಎಂಬುದು ಸಹ ತಿಳಿಯಲಿಲ್ಲ. ನನಗೆ ಏನು ಹೇಳಬೇಕು ಎಂಬುದು ಸಹ ತಿಳಿಯಲಿಲ್ಲ. ಒಂದು ರೀತಿಯ ಪ್ಯಾನಿಕ್ ಅಟ್ಯಾಕ್ ಆಗಿಬಿಟ್ಟಿತು. ಆದರೆ ನಾನು ದುಃಖಿಸಿದೆ ಎಂದು ನಾನು ಹೇಳಲಾರೆ’ ಎಂದಿದ್ದಾರೆ ರಣ್ಬೀರ್ ಕಪೂರ್.
ರಣ್ಬೀರ್ ಕಪೂರ್ ತಂದೆ ರಿಷಿ ಕಪೂರ್ ಬಾಲಿವುಡ್ನ ಖ್ಯಾತ ನಟ. ರಿಷಿ ಕಪೂರ್ ಮೇ 2020 ರಲ್ಲಿ ಕ್ಯಾನ್ಸರ್ ನಿಂದ ನಿಧನರಾದರು. ಅವರು ನಿಧನರಾದಾಗ ಸಾಕಷ್ಟು ಮಂದಿ ಕಣ್ಣೀರು ಹಾಕಿದ್ದಾರೆ. ಆದರೆ ಸ್ವತಃ ಅವರ ಮಗ ರಣ್ಬೀರ್ ಕಪೂರ್ ಕಣ್ಣೀರು ಹಾಕಲಿಲ್ಲ. ಅದಕ್ಕೆ ಮುಖ್ಯ ಕಾರಣವೆಂದರೆ ರಿಷಿ ಕಪೂರ್ ಬಹಳ ಸಿಡುಕಿನ ವ್ಯಕ್ತಿ. ಮಕ್ಕಳು, ಪತ್ನಿ ಮೇಲೆ ಜಗಳವಾಡದ ದಿನವೇ ಇರಲಿಲ್ಲವಂತೆ. ಸಿಡುಕೆಂದರೆ ಮಹಾ ಸಿಡುಕು. ಇದೇ ಕಾರಣಕ್ಕೆ ರಣ್ಬೀರ್ ಕಪೂರ್, ತಂದೆ ರಿಷಿ ಕಪೂರ್ ಅವರಿಂದ ದೂರವೇ ಬೆಳೆದರಂತೆ. ಇಬ್ಬರ ನಡುವೆ ದೊಡ್ಡ ಅಂತರವೇ ಇತ್ತು’ ಎಂಬುದನ್ನು ಸಹ ರಣ್ಬೀರ್ ಕಪೂರ್ ಹೇಳಿಕೊಂಡಿದ್ದಾರೆ.
ರಣಬೀರ್ ಕಪೂರ್ ಅವರು ಇಂದಿಗೂ ತಮ್ಮಿಬ್ಬರ ನಡುವಿನ ಅಂತರವನ್ನು ಎಂದಿಗೂ ಕಡಿಮೆ ಮಾಡಲು ಸಾಧ್ಯವಾಗಲಿಲ್ಲ ಎಂಬ ತಪ್ಪಿತಸ್ಥ ಭಾವನೆ ಇದೆ ಎಂದು ಹೇಳಿದರು. ಅವರು ಚಿಕಿತ್ಸೆಗೆ ಒಳಗಾದಾಗ, ನಾವು ನ್ಯೂಯಾರ್ಕ್ನಲ್ಲಿ ಒಂದು ವರ್ಷ ಒಟ್ಟಿಗೆ ಕಳೆದೆವು. ಅವರು ಆಗಾಗ ನಮ್ಮ ಸಂಬಂಧದ ಬಗ್ಗೆ ಮಾತನಾಡುತ್ತಿದ್ದರು. 45 ದಿನ ಇದ್ದ ನಾನು ಒಂದು ದಿನ ಬಂದು ಅಳತೊಡಗಿದ. ನನ್ನ ಮುಂದೆ ಅವನು ಎಂದಿಗೂ ದುರ್ಬಲನಾಗಲಿಲ್ಲ. ಇದು ನನಗೆ ತುಂಬಾ ವಿಚಿತ್ರವಾಗಿತ್ತು ಏಕೆಂದರೆ ನಾನು ಅವನನ್ನು ಹಿಡಿಯಬೇಕೇ ಅಥವಾ ತಬ್ಬಿಕೊಳ್ಳಬೇಕೇ ಎಂದು ನನಗೆ ತಿಳಿದಿರಲಿಲ್ಲ.
ಆ ಸಮಯದಲ್ಲಿ ನಮ್ಮ ಸಂಬಂಧದ ನಡುವಿನ ಅಂತರವನ್ನು ನಾನು ನಿಜವಾಗಿಯೂ ಅನುಭವಿಸಿದೆ. ನನ್ನಲ್ಲಿ ತಪ್ಪಿತಸ್ಥ ಭಾವನೆ, ನಮ್ಮ ನಡುವಿನ ಅಂತರವನ್ನು ಕಡಿಮೆ ಮಾಡಿ ಅವನನ್ನು ತಬ್ಬಿ ಸ್ವಲ್ಪ ಪ್ರೀತಿಯನ್ನು ನೀಡುವ ಧೈರ್ಯ ನನ್ನಲ್ಲಿ ಇರಲಿಲ್ಲ ಎಂದು ರಣಬೀರ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.